ತಿಪಟೂರು: ದಿನಾಂಕ:30.01. 2025 ನೇ ಗುರುವಾರ ತಿಪಟೂರು ಪೊಲೀಸ್ ಇಲಾಖಾ ವತಿಯಿಂದ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ರಾಮಣ್ಣ ಸಿ ಅವರು ನಗರದ ಇಂಡಿಸ್ ಕೆರೆ ಗೇಟ್ ಬಳಿ ಇರುವ ಜಾಕಿ ಮತ್ತು ವೆರ್ ವೆಲ್ ಗಾರ್ಮೆಂಟ್ಸ್ ನ ಜೈ ಮಾರುತಿ ಆಟೋ ಮಾಲಿಕಾ ಮತ್ತು ಚಾಲಕರ ಸಂಘದ ಸಹಯೋಗದಲ್ಲಿ ಸುಮಾರು 100ರಿಂದ 120 ಆಟೋ ಚಾಲಕರಿಗೆ ರಸ್ತೆ ಸುರಕ್ಷತಾ ಸಪ್ತಾಹದ ಬಗ್ಗೆ ಅರಿವು ಮೂಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಪ್ರತಿಯೊಬ್ಬರೂ ಎಲ್ಲಾ ವಾಹನಗಳಿಗೂ ಫಿಟ್ನೆಸ್ ಮತ್ತು ವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಹಾಗೂ ರಸ್ತೆಯಲ್ಲಿರುವ ಚಾಲನಾ ಸೂಚನಾ ಫಲಕಗಳನ್ನು ನೋಡಿಕೊಂಡು ವಾಹನಗಳನ್ನು ಚಾಲನೆ ಮಾಡಬೇಕು, ಕಡ್ಡಾಯವಾಗಿ ಎಡಬದಿಯಲ್ಲಿ ಚಾಲನೆ ಮಾಡಬೇಕು ತಿರುವುಗಳಲ್ಲಿ ಓವರ್ ಟೇಕ್ ಮಾಡಬಾರದು ಮತ್ತು ಚಾಲಕರು ಜೀವ ವಿಮೆ ಮಾಡಿಸಿಕೊಳ್ಳಬೇಕು ಅಕಸ್ಮಾತ್ ವಾಹನಗಳು ಅಪಘಾತಗೊಂಡರೆ ಚಾಲಕರನ್ನೇ ನಂಬಿಕೊಂಡಿರುವ ನಿಮ್ಮ ಕುಟುಂಬಗಳಿಗೆ ವಿಮೆಯಿಂದ ಸಹಾಯವಾಗುತ್ತದೆ, ಅತಿ ವೇಗದ ಚಾಲನೆ ಮಾಡಬೇಡಿ, ಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತಗಳನ್ನು ತಪ್ಪಿಸಿ, ಜೀವ ಅತ್ಯಮೂಲ್ಯವಾದದ್ದು, ರಸ್ತೆಗಳಲ್ಲಿ ವೀಲಿಂಗ್ ಮಾಡುವುದು ಅಡ್ಡಾದಿಡ್ಡಿ ಚಾಲನೆ ಮಾಡುವುದು ಅಪರಾಧ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಪೇದೆ ಬೈರೇಶ ರವರು ಜೈ ಮಾರುತಿ ಆಟೋ ಸಂಘದ ಅಧ್ಯಕ್ಷರಾದ ಮಹೇಶ್, ಉಪಾಧ್ಯಕ್ಷರಾದ ರಂಗಸ್ವಾಮಿ, ಪುಟ್ಟೇಗೌಡರು ಖಜಾಂಚಿ, ಹರ್ಷ ಕಾರ್ಯದರ್ಶಿ, ಜವರೇಗೌಡ, ಯತೀಶ್, ನವೀನ್, ರಾಜು ವಸಂತಕುಮಾರ್, ಗಿರೀಶ್, ವಿಕಾಸ್, ಪ್ರದೀಪ್, ಚೇತನ್, ಅರುಣ್, ರಾಮಣ್ಣ, ನಾಗೇಶ್, ಕುಮಾರ್, ಲೋಕೇಶ್, ತೇಜು ಇನ್ನು ಮುಂತಾದವರು ಇದ್ದರು
ಜಾಕಿ ಮತ್ತು ವೆರ್ ವೆಲ್ ಗಾರ್ಮೆಂಟ್ಸ್ ನ ಜೈ ಮಾರುತಿ ಆಟೋ ಮಾಲಿಕಾ ಮತ್ತು ಚಾಲಕರ ಸಂಘದ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಯಶಸ್ವಿ
ಜನವರಿ 31, 2025
0
Tags
