ಧಾರವಾಡ: 'ವಿಶ್ವಕರ್ಮ ಸಮುದಾಯದವರು ಕಾಯಕ ತತ್ವ ನಂಬಿ ಬದುಕುತ್ತಿದ್ದಾರೆ. ಪಂಚ ಕಸುಬಿನಿಂದ ಈ ಸಮುದಾಯ ಎಲ್ಲರೊಂದಿಗೆ ಬೆರೆತಿದೆ, ಸರ್ಕಾರ ಸಮುದಾಯದ ಬೇಡಿಕೆಗಳಿಗೆ ಮನ್ನಣೆ ನೀಡಬೇಕು' ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಒತ್ತಾಯಿಸಿದರು.
ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ವತಿಯಿಂದ ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದರಾಜ್ಯಮಟ್ಟದ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. “ಸರ್ಕಾರವು ಶಿರಸಂಗಿ ಹಾಗೂ ತಿಂಥಣಿ ಮೌನೇಶ್ವರ ದೇವಸ್ಥಾನ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿಶ್ವಕರ್ಮ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಅನುದಾನ ಒದಗಿಸಬೇಕು' ಎಂದರು.
ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶವನ್ನು ಅಭಿನವನಾಗಲಿಂಗ ಸ್ವಾಮೀಜಿ ಚಿಕ್ಕೋಡಿ, ಕ,ವಿ.ಜ.ಸೇ ಸಂಘದ ರಾಜ್ಯಾಧ್ಯಕ್ಷರಾದ ಎಂ. ಸೋಮಶೇಖರ್, ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಭಾಸ್ಕರ ಬಡಿಗೇರ್ ವಕೀಲರು, ಪವಿತ್ರಾ ಪ್ರಭಾಕರ್ ಆಚಾರ್ ಸಾಂತ್ವಾನ ಫೌಂಡೇಶನ್ ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಇವರುಗಳ ಘನ ಉಪಸ್ಥತಿಯಲ್ಲಿ ಕಾರ್ಯಕ್ರಮವು ಉದ್ಘಾಟನೆಗೊಂಡಿತು.
ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, 'ವಿಶ್ವಕರ್ಮ ಸಮಾಜದವರು ಸಂಘಟಿತರಾಗಬೇಕು. ಸಂಘಟಿತರಾಗಿ ರಾಜಕೀಯವಾಗಿಯೂ ಸ್ಥಾನಮಾನವನ್ನು ಪಡೆಯಲು ಮುಂದಾಗಬೇಕು' ಎಂದರು.
ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕನ್ನಡ ಸೋಮು ಮಾತನಾಡಿ, 'ವಿಶ್ವಕರ್ಮ ಸಮುದಾಯ ಅರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ವಿಶ್ವಕರ್ಮ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರಿಸಬೇಕು. ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು' ಎಂದು ಆಗ್ರಹಿಸಿದರು.
'ವಿಶ್ವಕರ್ಮನಿಗಮಕ್ಕೆ 300 ಕೋಟಿ ಅನುದಾನ ನೀಡಬೇಕು.ವಿಧಾನಸೌಧದ ಮುಖ್ಯದ್ವಾರದಲ್ಲಿ ವಿಶ್ವಕರ್ಮ ಪ್ರತಿಮ ಸ್ಥಾಪನೆ ಮಾಡಬೇಕು' ಎಂದು ಕೋರಿದರು. 34 ಸಾಧಕಿಯರನ್ನು ಸನ್ಮಾನಿಸಲಾಯಿತು.
ಕಾರ್ಯಕರ್ಮದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾಪೌರರಾದ ರಾಮಣ್ಣ ಬಡಿಗೇರ್, ಧಾರವಾಡ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಸೀಮಾ ಮಸೂತಿ, ಅಂತರಾಷ್ಟ್ರೀಯ ಯೋಗಗುರು, ರಾಜ್ಯ ಪ್ರಭಾವಿಗಳಾದ ಡಾ. ಭವರ್‌ಲಾಲ್ ಆರ್ಯ, ಕೆಂಪೆಗೌಡ ಪ್ರಶಸ್ತಿ ಪುರಸ್ಕೃತರಾದ ಈಶ್ವರ್ ವಿಶ್ವಕರ್ಮ, ಪುರುಷೋತ್ತಮ್ ಆಚಾರ್ಯ ಶಿಲ್ಪಿಗಳು ಶಿವಾರಪಟ್ಟಣ, ಶ್ರೀಮತಿ ರೂಪ ಪರಮೇಶ್ವರ್ ಶಿಕ್ಷಕರು ಹಾಗೂ ಸಮಾಜ ಸೇವಕರು ಅರಸೀಕೆರೆ, ಪರಮೇಶ್ವರ್ ಯೋಧರು, ಶ್ರೀಮತಿ ಶಾಂತಲಾ ಆಚಾರ್ಯ ಕಲಾವಿದರು ದಾವಣಗೆರೆ. ರಾಜ್ಯ ಉಪಾಧ್ಯಕ್ಷರು ಕ.ವಿ.ಜ.ಸೇ ಸಂಘ, ಶ್ರೀಮತಿ ಉಷಾ ವಿಶ್ವಕರ್ಮ ಕಲಾವಿದರು ದಾವಣಗೆರೆ, ಶ್ರೀಮತಿ ಶುಭ ವಿಶ್ವಕರ್ಮ ಪತ್ರಕರ್ತರು, ಸಮಾಜ ಸೇವಕರು ತಿಪಟೂರು, ಡಾ. ಭಾಸ್ಕರಾಚಾರ್ ಪ್ರಧಾನ ಸಂಪಾದಕರು ಭಾಸ್ಕರ ಪತ್ರಿಕೆ ತಿಪಟೂರು ಹಾಗೂ ಸುರೇಶಾಚಾರ್ ಇವರುಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
