60 ಕೋಟಿ ಮಂದಿ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿಯೂ ಗಂಗಾ ನದಿ ಪವಿತ್ರವಾಗಿಯೇ ಉಳಿದಿದೆ: ಪ್ರಮುಖ ವಿಜ್ಞಾನಿ ಹೇಳಿಕೆ

ಭಾಸ್ಕರ ಪತ್ರಿಕೆ
0

60 ಕೋಟಿ ಮಂದಿ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿಯೂ ಗಂಗಾ ನದಿ ಪವಿತ್ರವಾಗಿಯೇ ಉಳಿದಿದೆ, ಬೇರೆ ಯಾವುದೇ ನದಿಗೆ ಇಲ್ಲದ ಸ್ವಯಂ ಶುದ್ಧೀಕರಣ ಶಕ್ತಿ ಗಂಗಾ ನದಿಗೆ ಇದೆ. ಆದ್ದರಿಂದ ಎಷ್ಟು ಕೋಟಿ ಭಕ್ತರು ಇಲ್ಲಿ ಸ್ನಾನ ಮಾಡಿದರೂ ನದಿಗೆ ಯಾವುದೇ ಮಾಲಿನ್ಯದ ಭೀತಿ ಇಲ್ಲ ಎಂದು ಪ್ರಮುಖ ವಿಜ್ಞಾನಿ ಡಾಕ್ಟರ್ ಅಜಯ್ ಸೋಂಕರ್ ಹೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.

ಗಂಗಾ ನದಿಯಲ್ಲಿ ಸಾವಿರದ ನೂರು ವಿಧದ ಬ್ಯಾಕ್ಟೀರಿಯೋ ಫೇಜ್ ಗಳಿವೆ. ಅವು ಭದ್ರತಾ ಸಿಬ್ಬಂದಿಗಳ ರೀತಿಯಲ್ಲಿ ಕೆಲಸ ಮಾಡುತ್ತದೆ ವಿಷಕಾರಿ ಬ್ಯಾಕ್ಟೀರಿಯಗಳನ್ನು ಅವು ಪತ್ತೆ ಹಚ್ಚುತ್ತದಲ್ಲದೆ ಅವನು ಸರ್ವನಾಶ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಸಂಶಯ ಇರುವವರು ನನ್ನೆದುರು ಬಂದು ಗಂಗಾಜಲವನ್ನು ಪರೀಕ್ಷೆಗೆ ಒಡ್ಡಬಹುದು. ಸ್ವಯಂ ಶುದ್ಧೀಕರಣ ಶಕ್ತಿಯುಳ್ಳ ಜಗತ್ತಿನ ಏಕೈಕ ನದಿ ಗಂಗಾನದಿ ಎಂದವರು ಹೇಳಿದ್ದಾರೆ.
ಕ್ಯಾನ್ಸರ್, ಡಿಎನ್ಎ, ಸೆಲ್ ಬಯಾಲಜಿ, ಓಟೊ ಫಾಗಿ ಮುಂತಾದವುಗಳಲ್ಲಿ ಜಾಗತಿಕ ಸಂಶೋಧಕರಾಗಿ ಇವರು ಗುರುತಿಸಿಕೊಂಡಿದ್ದಾರೆ ವಾಗನಿಂಗಲ್, ವಿಶ್ವವಿದ್ಯಾನಿಲಯ ರೈಸ್ ವಿಶ್ವವಿದ್ಯಾನಿಲಯ, ಟೋಕಿಯೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಮುಂತಾದ ಪ್ರಮುಖ ಸಂಸ್ಥೆಗಳಲ್ಲಿ ಇವರು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*