ತಿಪಟೂರು: ನೊಣವಿನಕೆರೆ ಹೋಬಳಿ ಹಾರೋಘಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಶಾಲಾ ವಾರ್ಷಿಕೋತ್ಸವ ಹಾಗೂ ಕಲಿಕೋಪಕರಣಗಳ ಪ್ರದರ್ಶನ ಮತ್ತು ಪೌರಾಣಿಕ ವೀರ ಅಭಿಮನ್ಯು ನಾಟಕದ ಶ ಪ್ರದರ್ಶನ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಚಂದ್ರಯ್ಯನವರು ಉದ್ಘಾಟಿಸಿ ಮಾತನಾಡುತ್ತಾ ಈ ಸುಂದರ ಹಸಿರು ಪರಿಸರ ನಿರ್ಮಾಣ ಹಾಗೂ ಕಸದಿಂದ ರಸ ಮಾಡಿ ಪ್ಲಾಸ್ಟಿಕ್ಬಾಟಲ್ಗಳು ಮತ್ತು ಹಳೆ ಟೈಯರ್ ಗಳಿಂದ ಒಳ್ಳೆಯ ಹಸಿರು ಪರಿಸರವನ್ನ ನಿರ್ಮಾಣ ಮಾಡಿದ್ದೀರಾ ಮತ್ತು ಪೌರಾಣಿಕ ನಾಟಕವನ್ನು ಕಲಿತು ಆಡುತ್ತಿರುವುದು ತುಂಬಾ ಸಂತೋಷತಂದಿದೆ ಪ್ರತಿದಿನ ಖಾಸಗಿ ಶಾಲೆಗಳ ಹಾವಳಿ ಜಾಸ್ತಿ ಇದ್ದರೂ ಸಹ 28 ಮಕ್ಕಳ ಹಾಜರಾತಿ ಮತ್ತು ಗ್ರಾಮಸ್ಥರ ಸಹಕಾರ ಶಿಕ್ಷಕರ ಎಡಬಿಡದೆ ಶ್ರಮ ಸಾರ್ಥಕವಾಗಿದೆ ಎಂದು ಶ್ಲಾಘಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶಿವಶಂಕರ್ ಮಾತ್ನಾಡಿ ಈ ಪುಟ್ಟ ಹಳ್ಳಿಯಲ್ಲಿ ಪುಟ್ಟ ಮಕ್ಕಳ ಅದ್ಭುತ ಪ್ರದರ್ಶನ ನೋಡಿ ಹರ್ಷಿಸುತ್ತ ಧನ ಸಹಾಯ ನೀಡಿ ಮಕ್ಕಳ ಕಲೆ ಸಾಹಿತ್ಯ ಸಂಗೀತದ ಪ್ರೋತ್ಸಾಹಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ ಮತ್ತು ಉನ್ನತ ಸಾಧನೆಗೆ ಗ್ರಾಮೀಣ ಮಕ್ಕಳು ಸಕಲ ಮೇಲುಗೈ ಸಾಧಿಸಲು ನಿಮ್ಮನಮ್ಮೆಲ್ಲರ ಪ್ರಯತ್ನನಿರಂತರವಾಗಿರಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೈತಕವಿ ಡಾ. ಪಿ ಶಂಕ್ರಪ್ಪ ಬಳ್ಳೇಕಟ್ಟೆ ಅವರು ಮಾತನಾಡುತ್ತಾ ಉತ್ತಮ ಗುರುಹಿರಿಯರಿದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಒಳ್ಳೆಯ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ ಹಾರೋಘಟ್ಟದಂತಹ ಗ್ರಾಮದಲ್ಲಿ ಗುರು ಹಿರಿಯರ ಶ್ರಮದಿಂದ ಗ್ರಾಮೀಣ ಶಾಲೆಗಳಲ್ಲಿ ಸನಾತನ ಸಂಸ್ಕೃತಿ ಉಳಿಯಲು ತನುಮನ ಧನ ಸಹಾಯ ಮಾಡಿರುವ ಸರ್ವರಿಗೂ ಆ ಭಗವಂತ ಇನ್ನು ಶಕ್ತಿ ನೀಡಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಜೀವನ ಚಿನ್ನದಂತ ಜೀವನ ಅವರುಗಳ ಪ್ರತಿಭೆಗೆ ಹೆಚ್ಚಿನ ಸೌಲಭ್ಯಗಳು ಸರ್ಕಾರ ಮತ್ತು ಸಮಾಜದಿಂದ ಲಭಿಸಲಿ ಎಂದು ಹಾರೈಸಿದರು ಎಂದರು
ಕಿರುತೆರೆ ನಟ ದಯಾನಂದ್ ಸಾಗರ್ ಮಡೆನೂರು ಸೋಮಶೇಖರ್ ಶಿಕ್ಷಕರಾದ ಪಟ್ಟಬಿರ ಎಸ್ ಡಿ ಎಂ ಸಿ ಅಧ್ಯಕ್ಷರಾದಂತಹ ರಾಜಶೇಖರ್ ಸಭೆಯ ಉದ್ದೇಶಿ ಮಾತನಾಡಿದರು ಸಮಾರಂಭದಲ್ಲಿ ಗುತ್ತಿಗೆದಾರದ ಮೈಲಾರಪ್ಪ ಗ್ರಾ.ಪಂ. ಸದಸ್ಯ ಮಂಜಣ್ಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ,ದಕ್ಷಿಣ ಮೂರ್ತಿ, ಸನ್ಮಾನಿತರಾದ ಶ್ರೀಮತಿ ವಹಿದಾ, ಸುಜಾತ , ಪುಟ್ಟಬಸಪ್ಪ ಹಾರ್ಮೋನಿಯಂ ಗುರು ಸಿದ್ದಯ್ಯ, ಗಂಗಾಧರ್, ಗಂಗಾಧರ್ಯ ಶಿಕ್ಷಕರಾದ ಭುವನೇಶ್ವರಿ ಲತಾ ಹಾಜರಿದ್ದು ಶಾಲಾ ಮಕ್ಕಳು ಪ್ರಾರ್ಥಿಸಿ, ಪ್ರಕಾಶ್ ಅವರು ಸ್ವಾಗತಿಸಿ, ಶಿಕ್ಷಕ ಬಸವರಾಜ್ ರವರು ಕಾರ್ಯಕ್ರಮ ನಿರೂಪಿಸಿದರು ಶಾಲಾ ಮಕ್ಕಳಿಂದ ವೀರ ಅಭಿಮನ್ಯು ಪೌರಾಣಿಕ ನಾಟಕ ಪ್ರದರ್ಶನವಾಯಿತು.



