ದಕ್ಷಿಣ ಐರ್ಲೆಂಡ್ ನ ಕೌಂಟಿ ಕಾರ್ಲೋ ಪಟ್ಟಣದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಲೋ ಪಟ್ಟಣದ ಬಳಿಯ ಗ್ರೈಗುನಾಸ್ಪಿಡ್ಡೋಜ್ ಎಂಬಲ್ಲಿ ಕಪ್ಪು ಬಣ್ಣದ ಆಡಿ ಕಾರು ರಸ್ತೆಯಿಂದ ಜಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಮೃತರನ್ನು ಚೆರುಕುರಿ ಸುರೇಶ್ ಚೌಧರಿ ಮತ್ತು ಭಾರ್ಗವ್ ಚಿತ್ತೂರಿ ಎಂದು ಐರಿಶ್ ಪೊಲೀಸರು ಗುರುತಿಸಿದ್ದಾರೆ. ಐರಿಶ್ ರಾಜಧಾನಿ ಡಬ್ಲಿನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸಂದೇಶವನ್ನು ಬಿಡುಗಡೆ ಮಾಡಿದೆ. ಕಾರ್ಕ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಐರಿಶ್ ಪ್ರಧಾನಿ ಮೈಕೆಲ್ ಮಾರ್ಟಿನ್, ಅಪಘಾತದ ಸುದ್ದಿ ಕೇಳಿದ ನಂತರ “ಆಘಾತಕ್ಕೊಳಗಾಗಿದ್ದೇನೆ” ಎಂದು ಹೇಳಿದ್ದಾರೆ.
ಡಬ್ಲಿನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದೆ.

