ಅರಸೀಕೆರೆ ಹಾಸನ ಜಿಲ್ಲೆ ಶ್ರೀ ಪರಮೇಶ್ವರ ವಿಶ್ವಕರ್ಮ ರವರು ಅರಸೀಕೆರೆ ತಾಲೂಕು ಹಾರನಹಳ್ಳಿ ಗ್ರಾಮದವರು 1999 ರಲ್ಲಿ ಅಗಸ್ಟ್ ರಲ್ಲಿ ಭಾರತ ಗಡಿ ಭದ್ರತಾ ಪಡೆಯಲ್ಲಿ ಸೈನಿಕರಾಗಿ ಸೇವೆಗೆ ಸೇರಿದ್ದು ದೇಶದ ನಾನಾಗಡಿ ಭಾಗದಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿದ್ದರು, ಸುಮಾರು 26 ವರ್ಷ ನೀಡಿದ ಸೇವೆ ಪರಿಗಣಿಸಿ ಫೆಬ್ರವರಿ 22ರಂದು ತಮಿಳುನಾಡಿನ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ತಮಿಳುನಾಡು ಸರ್ಕಾರ ವತಿಯಿಂದ ಪರಮೇಶ್ ವಿಶ್ವಕರ್ಮ ರವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿರುತ್ತಾರೆ, ಶ್ರೀಮತಿ ಉಷಾ ವಿಶ್ವಕರ್ಮ ಕಲಾವಿದರು ದಾವಣಗೆರೆ ಇವರುಗಳಿಗೆ ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಿಳಾ ಪ್ರಥಮ ಜಾಗೃತಿ ಸಮಾವೇಶದಲ್ಲಿ ವಿಶ್ವಕರ್ಮ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ವಿಜೇತರಿಗೆ ರಾಜ್ಯಾಧ್ಯಕ್ಷರಾದ ಶ್ರೀ ಸೋಮಶೇಖರ್ ಅಲಿಯಾಸ್ ಕನ್ನಡ ಸೋಮು, ಶ್ರೀ ಭಾಸ್ಕರ್ ಶ್ರೀ ರವಿ ವಿಶ್ವಕರ್ಮ, ಪುರುಷೋತ್ತಮ್ ಶಿವಾರ ಪಟ್ಟಣ, ಈಶ್ವರ ವಿಶ್ವಕರ್ಮ, ಸತೀಶ್ ಮುಳ್ಳೂರು, ಸುರೇಶ್ ಸುಣ್ಣದಹಳ್ಳಿ, ದೇವೇಂದ್ರಚಾರಿ ಇವರುಗಳು ಅಭಿನಂದನೆ ಸಲ್ಲಿಸಿದರು.
