ತಿಪಟೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ ಸರ್ಕಲ್) ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜನರ ಹೃದಯದಲ್ಲಿ ಸ್ಥಾನ ಪಡೆದ ಜನನಾಯಕ ಇವರ 83ನೇ ವರ್ಷದ ಹುಟ್ಟುಹಬ್ಬವನ್ನು ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿ ನಾಗರಾಜು, ಹಿರಿಯ ನಾಗರಿಕರಾದ ಸಿದ್ದಪ್ಪನವರು, ಕುಮಾರಿ ಪದ್ಮರವರು, ಹಾಗೂ ಭಾಸ್ಕರ್ ಟಿವಿ ಯೂಟ್ಯೂಬ್ ವಾಹಿನಿಯ ಸುದ್ದಿ ವಾಚಕರಾದ ಶುಭ ವಿಶ್ವಕರ್ಮ ರವರು ಶ್ರೀಯುತ ಬಿಎಸ್ ಯಡಿಯೂರಪ್ಪನವರ ಜನ್ಮದಿನವನ್ನು ಸಿಹಿ ಹಂಚಿ ಆಚರಿಸುವ ಮೂಲಕ ಸಂಭ್ರಮಿಸಿದರು.
ವರದಿ: ಶುಭ ವಿಶ್ವಕರ್ಮ


