ದೆಹಲಿ ಹಿಂಸಾಚಾರಕ್ಕೆ ಐದು ವರ್ಷ: ನಿಂತಲ್ಲೇ ನಿಂತ ಪ್ರಕರಣ

ಭಾಸ್ಕರ ಪತ್ರಿಕೆ
0

ದೆಹಲಿ ಹಿಂಸಾಚಾರಕ್ಕೆ ಐದು ವರ್ಷಗಳು ಸಂದಿವೆ. 2020 ಫೆಬ್ರವರಿ 23ರಿಂದ 26ರವರೆಗೆ ಮೂರು ದಿನಗಳ ಕಾಲ ನಡೆದ ಹಿಂಸಾಚಾರದಲ್ಲಿ 53 ಮಂದಿ ಹತ್ಯೆಗೀಡಾಗಿ 500ಕ್ಕೂ ಅಧಿಕ ಮಂದಿ ಗಾಯಗೊಂಡರು.

ನೂರಕ್ಕಿಂತಲೂ ಅಧಿಕ ಮನೆಗಳು ಮತ್ತು ವ್ಯಾಪಾರ ಮಳಿಗೆಗಳನ್ನು ಲೂಟಿ ಹೊಡೆಯಲಾಯಿತು. ವಿಷಾದ ಏನೆಂದರೆ ಐದು ವರ್ಷಗಳೇ ಕಳೆದು ಕೂಡ ಹೆಚ್ಚಿನ ಪ್ರಕರಣಗಳೆಲ್ಲ ನಿಂತಲ್ಲೇ ನಿಂತಿವೆ. 757 ಪ್ರಕರಣಗಳಿಗೆ ಸಂಬಂಧಿಸಿದ 2619 ಮಂದಿಯನ್ನು ಬಂಧಿಸಲಾಗಿತ್ತು.
ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಕೇವಲ 414 ಪ್ರಕರಣಗಳಲ್ಲಿ ಮಾತ್ರವೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

2098 ಮಂದಿಗೆ ಜಾಮೀನು ಲಬಿಸಿದೆ. 18 ಮಂದಿಯ ಮೇಲೆ ಯುಎಪಿಎ ಪ್ರಕರಣ ದಾಖಲಿಸಲಾಗಿದೆ. 109 ಪ್ರಕರಣಗಳಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ಇದರಲ್ಲಿ 19 ಮಂದಿಯನ್ನು ಮಾತ್ರ ಅಪರಾಧಿ ಎಂದು ನ್ಯಾಯಾಲಯ ಹೇಳಿದೆ. 91 ಮಂದಿಯನ್ನು ನ್ಯಾಯಾಲಯ ಬಿಟ್ಟು ಬಿಟ್ಟಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೇಳಿ 19 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಸರಕಾರ ಮಂಡಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೀತಾ ಇದ್ದ ಪ್ರತಿಭಟನೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಮತ್ತು ಈಗಿನ ದೆಹಲಿ ಬಿಜೆಪಿ ಸರ್ಕಾರದ ಸಚಿವನೂ ಆಗಿರುವ ಕಪಿಲ್ ಶರ್ಮಾ ಮಾಡಿರುವ ಭಾಷಣದ ಬಳಿಕ ದೆಹಲಿಯಲ್ಲಿ ಹಿಂಸಾಚಾರ ಸ್ಫೋಟಗೊಂಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*