ಈ ಕಾರ್ಯಕ್ರಮದಲ್ಲಿ ಸರಿಸುಮಾರು 230 ಸ್ಪರ್ಧಿಗಳು ಭಾಗವಹಿಸಿದ್ದರು, ಕಾರ್ಯಕ್ರಮದ ಆಯೋಜಕರು ಆದಂತಹ ಶ್ರೀಮತಿ ಅನುಷಾ ಕೃಷ್ಣರವರು ಸ್ಪರ್ಧಿಗಳನ್ನು ಕುರಿತು ಹಿತ ನುಡಿಗಳಿಂದ ನಮ್ಮ ಧಾರ್ಮಿಕತೆ ಸಂಸ್ಕೃತಿ ಹಾಗೂ ಸನಾತನವನ್ನು ಮುಂದಿನ ಪೀಳಿಗೆಗೆ ರವಾನಿಸುವಲ್ಲಿ ಈ ಭಗವದ್ಗೀತಾ ಕಲಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂಬ ಸ್ಪೂರ್ತಿದಾಯಕ ಮಾತುಗಳಿಂದ ಕೃಷ್ಣನಿಗೆ ಆರತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೆನಡಾದ ಆಂಟಾರಿಯೋ, ಆಸ್ಟ್ರೇಲಿಯಾ ಸಿಂಗಾಪುರ್, ಮೆಲ್ಬನ್, ಥೈಲ್ಯಾಂಡ್ & ಮಲೇಶಿಯಾದಂತಹ ಇತರೆ ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಕೊಯಂಬತ್ತೂರು, ನೆಲ್ಲೂರು, ನವದೆಹಲಿ, ಕಡಪ, ವಿಶಾಖಪಟ್ಟಣ, ಬೆಂಗಳೂರು, ಚಳ್ಳಕೆರೆ, ಮುಧೋಳ, ಗಜ್ವಲ್, ಹೈದರಾಬಾದ್, ಉಡುಪಿ, ಚೆನ್ನೈ, ಪುತ್ತೂರು, ವಿಜಯವಾಡ ಇನ್ನೂ ಅನೇಕ ಭಾಗದಿಂದ ಸ್ಪರ್ಧಿಗಳು ಭಾಗವಹಿಸಿದ್ದರು.
