'ರೈತಕವಿ' ಶಂಕರಪ್ಪ ಬಳ್ಳೇಕಟ್ಟೆ ಗೆ ಡಾ. ಎಂ ಲೀಲಾವತಿ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಭಾಸ್ಕರ ಪತ್ರಿಕೆ
0

ತಿಪಟೂರು: ಬೆಂಗಳೂರಿನ ಕನ್ನಡ ಸಂಸ್ಕೃತಿ ಇಲಾಖೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಗುರು ರಾಘವೇಂದ್ರ ಸೇವಾ ಕಲಾ ಟ್ರಸ್ಟ್ ವತಿಯಿಂದ ಲೀಲಾವತಿ ಅಮ್ಮನವರ ಎರಡನೇ ವರ್ಷದ ಪುಣ್ಯ ಸ್ಮರಣಾ ಸಮಾರಂಭದಲ್ಲಿ ಕಲ್ಪತರು ನಾಡಿನ 'ರೈತಕವಿ' ಡಾ. ಪಿ. ಶಂಕರಪ್ಪ ಬಳ್ಳೇಕಟ್ಟೆ ರವರಿಗೆ ಸಾಹಿತ್ಯ ಮತ್ತು ಸಮಾಜ ಸೇವಾ ಸಾಧನೆಗಾಗಿ 2024 -25 ನೇ ಸಾಲಿನ ವರನಟಿ "ಡಾ.ಎಂ ಲೀಲಾವತಿ ಸೇವಾ ರತ್ನ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಅಧ್ಯಕ್ಷರಾದ ಅರಸೀಕೆರೆ, ಉಮೇಶ್ ,ನಿರ್ಮಾಪಕ ರವಿ ಅಚಾರ್, ಸಾಹಿತಿ ಹಾಗು ಚಿತ್ರನಟ  ಚಿಕ್ಕಹೆಜ್ಜಾಜಿ ಮಹದೇವ್, ಸಾಹಿತಿ ರೂಪ ಹೊಸದುರ್ಗ, ಇದು ನಮ್ಮ ಶಾಲೆ ಸಿನಿಮಾ ಖ್ಯಾತಿಯ ಮಂಡ್ಯ ಶಿವಲಿಂಗೇಗೌಡ ಹಾಗೂ ಲೀಲಾವತಿ ಅಮ್ಮನವರ ಅಪಾರ ಅಭಿಮಾನಿ ಬಳಗ ಉಪಸ್ಥಿತಲಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*