ಪ್ರಾಚೀನ ಇತಿಹಾಸವುಳ್ಳ ನಾಗಸಾಧು ತಪಸ್ವಿಗಳು, ವಾಸವಿದ್ದು ತಪಸ್ಸು ಮಾಡುತ್ತಿದ್ದ ಕ್ಷೇತ್ರವಾದ 12 ಸೊಪ್ಪಿನ 'ಪುಷ್ಕರಣಿಗೆ' ವಿಶ್ವರೂಪೇಂದ್ರ ಸ್ವಾಮೀಜಿಗಳ ಭೇಟಿ

ಭಾಸ್ಕರ ಪತ್ರಿಕೆ
0

ದಿನಾಂಕ 23-3-2025 ತಿಪಟೂರು ಭಾಸ್ಕರ ಪತ್ರಿಕೆಯ ಸಂಪಾದಕರಾದ  ಶ್ರೀ ಭಾಸ್ಕರಾಚಾರ್ಯರ ವರು  ಹರಿಹರದ ' ಶ್ರೀ ಕ್ಷೇತ್ರ ಜ್ಯೋತಿರ್ಮಠದಿ0ದ '  ಶ್ರೀ ಶ್ರೀ ವೀರೇಂದ್ರಸ್ವಾಮಿಗಳ ವಿರಚಿತ ' ಬರುವ  ಶ್ರೀವಿಶ್ವಾವಸು ಸಂವತ್ಸರದ  (ಸೂರ್ಯ ಸಿದ್ಧಾಂತದ )ಪಂಚಾಂಗವನ್ನು' ತಮ್ಮ  ಪತ್ರಿಕಾಲಯದಲ್ಲಿ  ತಿಪಟೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು/ ಸದಸ್ಯರಾದ  ಶ್ರೀ ಸೋಮಶೇಖರ್ ಸರ್ ಮತ್ತು ಶಂಕರ ಮಠದ ಸಹವರ್ತಿಗಳ ಅರ್ಚಕರಾದ ಶ್ರೀ ರಾಜಣ್ಣ  ಮತ್ತು ಕೆ ಆರ್ ಪೇಟೆ ತಾ // ನ  ವಿಶ್ವಕರ್ಮ ಸಮಾಜದ ಚಿಂತಕರಾದ  N.S.ಲೋಕೇಶ್ ವಿಶ್ವಕರ್ಮ ರವರು ಮತ್ತು ಹಾಸನಾದ ರಮೇಶ ಆಚಾರ್ಯ (ರಕ್ಷಣಾಪುರ) ಇನ್ನು ಅನೇಕ ಅಭಿಮಾನಿಗಳೊಂದಿಗೆ ಸೇರಿ ಬಿಡುಗಡೆ ಮಾಡಿಸಿದರು ಮತ್ತು ಇದೇ ದಿನ ಜ್ಯೋತಿರ್ ಮಠದ ನ್ಯಾಸ  ಉಪಪೀಠಾಧಿಪತಿಗಳಾದ ಶ್ರೀ ವಿಶ್ವರೂಪೇಂದ್ರ ಸ್ವಾಮಿಗಳು ತಿಪಟೂರು ಟೌನ್ ಮತ್ತು ತಿಪ್ಟೂರ್ ವ್ಯಾಪ್ತಿಯ ಗ್ರಾಮಗಳ ಪ್ರವಾಸದಲ್ಲಿದ್ದು,  ಮತಿಗಟ್ಟದ- ಗುಡ್ಡದ ಕಾಳಮ್ಮ ಕರ್ಮಟೇಶ್ವರ ದೇವಸ್ಥಾನ,  ಹೊನ್ನವಳ್ಳಿ, ಹoದನಕೆರೆ ಗ್ರಾಮಗಳ ಕಾಳಮ್ಮನವರ ದೇವಸ್ಥಾನಕ್ಕೆ ಸ್ವಯಂ ಭೇಟಿಕೊಟ್ಟು ದೇವಸ್ಥಾನದ ಅರ್ಚಕರು ಮತ್ತು ಪುರೋಹಿತರುಗಳ ಮೂಲಕ ಮತ್ತು ಗ್ರಾಮದ ಭಕ್ತಾದಿಗಳೊಂದಿಗೆ ಸೇರಿ  ಧಾರ್ಮಿಕ- ಷೋಡೇಶ ಪೂಜೆಗಳೊಂದಿಗೆ ಅಮ್ಮನವರ ಸಮ್ಮುಖದಲ್ಲಿ ಆಶೀರ್ವಚನ  ನೀಡಿ ಪಂಚಾಂಗಗಳನ್ನು ಬಿಡುಗಡೆ  ಮಾಡಿದರು. 

ವಿಶೇಷವಾಗಿ ಅದೇ ದಿನ ಹಂದನಕೆರೆ ಗ್ರಾಮದಲ್ಲಿರುವ ಪ್ರಾಚೀನ ಇತಿಹಾಸವುಳ್ಳ ನಾಗಸಾಧು   ತಪಸ್ವಿಗಳು, ವಾಸವಿದ್ದು ತಪಸ್ಸು ಮಾಡುತ್ತಿದ್ದ ಕ್ಷೇತ್ರವಾದ 12 ಸೊಪ್ಪಿನ 'ಪುಷ್ಕರಣಿಗೆ' ಭೇಟಿ  ಕೊಟ್ಟು ಹಂದನಕೆರೆ ಭಾಗದಲ್ಲಿ ಶೈಲೇಶ ಮಹಾರಾಜ ಆಳುತ್ತಿದ್ದ ಕಾಲಘಟ್ಟದಲ್ಲಿ  ಮಹಾಮಾಹಿಯ ಪುರುಷರು ಮಹಾರಾಜರಿಗೆ ನಿಕಟವಾಗಿದ್ದರು, ಆಗ ಮಹಾರಾಜನ ಪ್ರಿಯತಮೆ ನಾಗತಿ ಚೆನ್ನವ್ವಳಿಗೆ ಸಿದ್ದೇಶ್ವರರ ಮೇಲೆ ಆಸೆಯಾಗಿ ಆಕೆ ಅವರನ್ನು ಮೋಹಿಸತೊಡಗಿದಳು, ಆಗ ಸಿದ್ದೇಶ್ವರರು "ನೀನೊಂದು ಭಾವಿ ಕಟ್ಟಿಸು ಅದರಲ್ಲಿ ಸೀರು ಖಾಲಿಯಾದಾಗ ನಿನ್ನನ್ನು ಮದುವೆಯಾಗುತ್ತೆನೆ ಎಂದು ಹೇಳಿದರು" ಅಂದಿನಿಂದ ಭಾವಿ ಬತ್ತಿಲ್ಲ ಎಂದು ಅದರ ತಾಂತ್ರಿಕ ಮಹತ್ವವನ್ನು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*