ತಿಪಟೂರು: ದಾವಣಗೆರೆಯ ಹರಿಹರದ ಜ್ಯೋತಿರ್ಮಠದ ಶ್ರೀ ವಿಶ್ವರೂಪೇಂದ್ರ ಸ್ವಾಮಿಗಳು ತಿಪಟೂರಿಗೆ ಭೇಟಿಕೊಟ್ಟರು, ದಾವಣಗೆರೆ ಜಿಲ್ಲೆಯ ಹರಿಹರ ಶ್ರೀಜ್ಯೋತಿರ್ಮಠವು ಪ್ರಸಿದ್ಧವಾಗಿದ್ದು ಈ ಮಠದಿಂದ ಪಂಚಾಂಗವನ್ನು ಹೊರಡಿಸುವುದು ಸಂಪ್ರದಾಯ, ಪಂಚಾಂಗವನ್ನು ಸನಾತನ ಧರ್ಮದವರಿಗೆ ಪ್ರಮುಖ ವಾಗಿದೆ,ಯುಗಾದಿ ಹಬ್ಬವು ಹೋಸವರ್ಷ, ಇದು ಪ್ರಕೃತಿಯ ಸಂಪ್ರದಾಯ, ಯುಗಾದಿ ಹಬ್ಬದ ದಿನ ಪಂಚಾಂಗ ಪೂಜೆ ಮಾಡುವುದು ಕಡ್ಡಾಯ.
ಈ ಪಂಚಾಂಗ ಸಂಪ್ರದಾಯವನ್ನು ಪ್ರಚಾರ ಮಾಡುತ್ತಾ, ಹರಿಹರದ ವಿಶ್ವರೂಪೇಂದ್ರ ಸ್ವಾಮಿಗಳು ತಿಪಟೂರಿಗೆ ಭೇಟಿಕೊಟ್ಟು ತಿಪಟೂರಿನ ಕಾಳಮ್ಮನ ಬೆಟ್ಟದಲ್ಲಿ ಪಂಚಾಂಗವನ್ನು ಬಿಡುಗಡೆ ಮಾಡಿದರು, ಅದರ ಮಹತ್ವವನ್ನು ತಿಳಿಸಿದರು, ಹಂದನಕೆರೆ ಗ್ರಾಮದ ಕಾಳಿಕಾಂಬ ದೇವಾಲಯ, ತಿಪಟೂರಿನ ಕಾಳಿಕಾಂಬ ದೇವಾಲಯಕ್ಕೆ ಭೇಟಿನೀಡಿದರು, ಸಾರ್ವಜನಿಕವಾಗಿ ಡಾ. ಭಾಸ್ಕರ್ ಅವರ ಕಛೇರಿಯಲ್ಲಿ ಪಂಚಾಂಗ ವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಗೀತಾ ಭಾಸ್ಕರ್, ಶ್ರೀಯುತ ಮಡೆನೂರು ಸೋಮಶೇಖರಯ್ಯ,ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಗಳು, ನಿವೃತ್ತ ಶಿಕ್ಷಕರು, ಬೂಸರಾಜಣ್ಣ,ಧರಣೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು, ಗುರುಗಳ ಜೊತೆ ಎನ್ ಎಸ್ ಲೋಕೇಶ್ ವಿಶ್ವಕರ್ಮ, ಕೆ,ಆರ್,ಪೇಟೆ, ರಮೇಶ್ ಹಾಸನ ಇವರು ಆಗಮಿಸಿದ್ದರು.

