ಬೆಳಗೂರು: ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ ಬೆಂಗಳೂರು ವತಿಯಿಂದ ದಿನಾಂಕ 23/04/.2025 ನೇ ಬುಧವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವಿಶ್ವಕರ್ಮ ಬೃಹತ್ ಸಮಾವೇಶ ಸಂಘದ 5 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಮಾವೇಶ ದ ಸರ್ವಾಧ್ಯಕ್ಷರಾಗಿ ಡಾ. ವಸಂತ ಮುರಳಿ ಆಚಾರ್ ರವರನ್ನು ಆಯ್ಕೆ ಮಾಡಿದ್ದು ಇದರ ಅಂಗವಾಗಿ ದಿನಾಂಕ 22/03/2025 ನೇ ಶನಿವಾರ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕು ಶ್ರೀರಾಂಪುರ ಹೋಬಳಿ. ಬೆಲಗೂರು ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ಕ್ಷೇತ್ರಕ್ಕೆ ಸಂಘದ ವತಿಯಿಂದ ಭೇಟಿ ನೀಡಿ ಶ್ರೀ ಆಂಜನೇಯ ಸ್ವಾಮಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆದುಕೊಂಡ ಹಾಗೂ ಹೊಸದುರ್ಗ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರು ಮಾನ್ಯ ಬಿ ಜಿ ಗೋವಿಂದಪ್ಪಜಿ ರವರನ್ನು ಸಮಾವೇಶದ ಸರ್ವಾಧ್ಯಕ್ಷರು ಡಾ. ವಸಂತ ಮುರಳಿ ಆಚಾರ್ ರವರು ಬೆಳಗೂರು ನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಶಾಸಕರನ್ನು ಸಮಾವೇಶಕ್ಕೆ ಆಹ್ವಾನಿಸುವ ಮೂಲಕ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಎಂ ಸೋಮಶೇಖರ್, ಬೆಂಗಳೂರು ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸದುರ್ಗ ಪರಮೇಶ್ವರಚಾರ್, ಕಾರ್ಯಧ್ಯಕ್ಷರಾದ ಕೆ ಟಿ ಜಯಣ್ಣ, ಬೆಂಗಳೂರು ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ, ಗಿರಿಜಾ ಸುರೇಶಚಾರ್ ಹೊಸದುರ್ಗ, ಪ್ರಚಾರ ಸಮಿತಿ ರಾಜ್ಯಧ್ಯಕ್ಷರಾದ ತಿಪಟೂರು ಭಾಸ್ಕರಾಚಾರ್, ಮಾಧ್ಯಮ ವಕ್ತಾರರಾದ ಸತೀಶ್ ಮುಳ್ಳೂರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಸುಣ್ಣದಹಳ್ಳಿ ಸುರೇಶಚಾರ್ ತರೀಕೆರೆ, ಬೆಳಗೂರಿನ ವೀರೇಂದ್ರ ಕುಮಾರ್ ತಮ್ಮಯ್ಯ ಚಾರ್, ಮಾರಬಗಟ್ಟದ ವಿ. ದಯಾನಂದ, ಡಿ. ಲಿಂಗರಾಜು, ದಾವಣಗೆರೆಯ ಕುಮಾರಿ ಉಷಾರಾಣಿ, ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ಗಾಡಿ ಚಂದ್ರು, ತುಪ್ಪದಹಳ್ಳಿ ಮಂಜುನಾಥಚಾರ್, ರಾಮಗಿರಿ ಗೋವಿಂದ ರಾಜ್ ಉಪಸ್ಥಿತರಿದ್ದರು

