ಕನಕಪುರ: ಅಂಗನವಾಡಿ ಸಹಾಯಕಿಯೊಬ್ಬರು ಮಗುವಿನ ಕೈಗೆ ಬರೆ ಎಳೆದು, ಡೈಪರ್‌ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ, ಈ ದರಿದ್ರ ಘಟನೆ ತಾಲೂಕಿನ ಮಹರಾಜರಕಟ್ಟೆ ಗ್ರಾಮದಲ್ಲಿ ನಡೆದಿದೆ, ಮಹರಾಜಕಟ್ಟೆ ಗ್ರಾಮದ ರಮೇಶ್ ಹಾಗೂ ಚೈತ್ರಾ ಎಂಬುವವರ ಮಗು ದೀಕ್ಷಿತ್ ಮೇಲೆ ಅಂಗನವಾಡಿ ಸಹಾಯಕಿ ಚಂದ್ರಮ್ಮ ಈ ವಿಕೃತಿ ಮೆರೆದಿದ್ದಾಳೆ.
ಸದರೀ ಘಟನೆ ಸಂಬಂಧ ಅಂಗನವಾಡಿ ಸಹಾಯಕಿ ಚಂದ್ರಮ್ಮ ಎಂಬವರ ಮೇಲೆ ಮಗುವಿನ ಪೋಷಕರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬೆನ್ನಲ್ಲೇ ಚಂದ್ರಮ್ಮನನ್ನು ಅಮಾನತು ಮಾಡಲಾಗಿದೆ
ಅಂಗನವಾಡಿಯಲ್ಲಿ ಹಠ ಮಾಡುತ್ತಿದ್ದನೆಂದು ಚಂದ್ರಮ್ಮ ಕಂದನ ಕೈಗೆ ಬರೆ ಕೊಟ್ಟು,ನಂತರ
ಡೈಪರ್ ಒಳಗೆ ಖಾರದಪುಡಿ ಹಾಕಿದ್ದಾರೆ, ಅಂಗನವಾಡಿಯಿಂದ ಮಗು ಕರೆತರಲು ಹೋದಾಗ ಪೋಷಕರು ಇದನ್ನು ಗಮನಿಸಿ ಬಳಿಕ ದೂರು ನೀಡಿದ್ದಾರೆ.
