ಸಿದ್ದು ನಿವಾಸಗಳನ್ನು ನಿರ್ಮಾಣವನ್ನು ಪರಿಸಿಲಿಸಿದಶಾಸಕರಾದ ಎಮ್ ಆರ್ ಮಂಜನಾಥ್

ಭಾಸ್ಕರ ಪತ್ರಿಕೆ
0
ಹನೂರು: ರಾಜ್ಯ ಸರ್ಕಾರದಿಂದ ಬುಡಕಟ್ಟು ಸಮುದಾಯದವರಿಗೆ ಸಿದ್ದು ನಿವಾಸ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ಶಾಸಕ ಎಂ.ಆರ್ ಮಂಜುನಾಥ್ ಪರಿಶೀಲನೆ ನಡೆಸಿದರು… ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆ ಹೋಲ ಅರಣ್ಯ ವಾಸಿಗಳಿಗೆ ಹಾಗೂ ಬುಡಕಟ್ಟು ಸಮುದಾಯದವರಿಗೆ ಸಿದ್ದು ನಿವಾಸ ಯೋಜನೆ ಅಡಿ ಮನೆಗಳ ನಿರ್ಮಾಣಕ್ಕೆ 5 ಲಕ್ಷ ವೆಚ್ಚದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ಬುಡಕಟ್ಟು ಸಮುದಾಯದವರಿ ಹೆಚ್ಚಾಗಿ ವಾಸಿಸುವ ಕಲೋನಿಯಲ್ಲಿ ಶ್ರೀಮತಿ ಕಾವೇರಿ ಬಿನ್ ಮಂಜುನಾಥ ಎಂಬ ಫಲಾನುಭವಿ ಹೆಸರಿನಲ್ಲಿ ಒಂದು ಮಾದರಿ ಮನೆ ನಿರ್ಮಾಣ ಮಾಡಲಾಗುತ್ತಿತ್ತು.
ಸದರಿ ಮನೆಯ ನಿರ್ಮಾಣ ಹಂತದಲ್ಲಿರುವುದರಿಂದ ಮಾದರಿ ಮನೆಯ ಪರಿಶೀಲನೆಯನ್ನು ನಡೆಸಿದ ಶಾಸಕರು,ಮನೆ ನಿರ್ಮಾಣದಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಇದಲ್ಲದೆ 2022 ಹಾಗೂ 2023ರ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 2 ಲಕ್ಷ ಹಾಗೂ ನೆರೆಗ ಯೋಜನೆಯಾಡಿಯಲ್ಲಿ 30000 ಸಾವಿರ ವೆಚ್ಚದಲ್ಲಿ ಬುಡಕಟ್ಟು ಸಮುದಾಯದ ಮನೆ ನಿರ್ಮಿಸಲಾಗುತ್ತಿರುವ ಕಾಮಗಾರಿಯನ್ನು ಪರಿಶೀಲನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್,ಮುಖಂಡರುಗಳಾದ ಮಂಜೇಶ್ ಗೌಡ,ಡಿ.ಆರ್ ಮಾದೇಶ್,ಸುರೇಶ್, ಗೋಪಾಲ್ ನಾಯಕ,ವಿಜಯ್ ಕುಮಾರ್ ,ನಿಂಗರಾಜು,ವೆಂಕಟೇಶ್,ಅಭಿ,ಹಾಗೂ ಇನ್ನಿತರರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*