ರಾಜ್ಯಮಟ್ಟದ ವಿಶ್ವಕರ್ಮ ಬೃಹತ್‌ ಸಮಾವೇಶದ ಅಧ್ಯಕ್ಷರಾಗಿ ಶ್ರೀಮತಿ ವಸಂತ ಮುರಳಿ ಆಯ್ಕೆ

ಭಾಸ್ಕರ ಪತ್ರಿಕೆ
0

 


ಬೆಂಗಳೂರು: ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ (ರಿ) ರಾಜ್ಯಮಟ್ಟದ ಸಂಘಟನೆ ವತಿಯಿಂದ ಅನೇಕ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಹಾಗೂ ಹೊಸದುರ್ಗದಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ವಧು ವರರ ಮತ್ತು ವಿಶ್ವಕರ್ಮ ಸಮಾವೇಶವನ್ನು ನಡೆಸಿ ಅಭೂತ ಪೂರ್ವ ಯಶಸ್ವಿಗೊಳಿಸಿ ಈ ಸಂಘಟನೆ ರಾಜ್ಯಾದ್ಯಂತ ಹೆಸರು ಮಾಡಿದೆ. ಇದೇ ಉತ್ಸಾಹದಲ್ಲಿ ದಿನಾಂಕ 23/04/2025 ನೇ ಬುಧವಾರ ರಾಜ್ಯಮಟ್ಟದ ವಿಶ್ವಕರ್ಮ ಬೃಹತ್ ಸಮಾವೇಶ ಹಾಗೂ ಪಂಚ ವೃತ್ತಿಗಳಲ್ಲಿ ತೊಡಗಿಕೊಂಡು ಅಮೋಘ ಸಾಧನಗೈದಿರುವ ವಿಶ್ವಕರ್ಮ 5 ಪುರುಷ ಸಾಧಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 5 ಮಹಿಳಾ ಸಾಧಕಿಯರನ್ನು ಗುರುತಿಸಿ ನಗದು ಪ್ರಸಂಶಿಯ ಪತ್ರ ಸ್ಮರಣಿಕೆಯೊಂದಿಗೆ ವಿಶೇಷವಾಗಿ ಪುರಸ್ಕಾರ ನೀಡಿ ಗೌರವಿಸಲಾಗುವುದು,

ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹಾಗೂ ನಾಡು ನುಡಿಗಾಗಿ ಸೇವೆ ಸಲ್ಲಿಸಿರುವ ನೂರಾರು ಸಾಧಕರನ್ನು ಸಾಧಕೀಯರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ನೀಡಿ ಪುರಸ್ಕರಿಸಲು ತೀರ್ಮಾನಿಸಿದ್ದು ಜೊತೆ ಜೊತೆಯಲಿ ಹಾಗೂ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ 5 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬೃಹತ್ ಸಮಾವೇಶವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಉಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರದ ಮಾನ್ಯ ಸಚಿವರುಗಳು ಸಮ್ಮುಖದಲ್ಲಿ ನಡೆಸಲು ಉದ್ದೇಶಸಲಾಗಿದೆ,

ಈ ಸಮಾವೇಶದ ಅದ್ಯಕ್ಷತೆಯನ್ನು ಸಮಾಜದ ಮಹಿಳಾ ಮುಖಂಡರಾದ ಶ್ರೀಮತಿ ವಸಂತ ಮುರಳಿಯವರು ವಹಿಸಲಿದ್ದಾರೆ, ಇವರಿಗೆ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿ ಸಧ್ಯಕ್ಷರಾದ ಡಾ. ಭಾಸ್ಕರ್‌ ಹಾಹೂ ತುಮಕೂರು ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶುಭ ವಿಶ್ವಕರ್ಮ ರವರು ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*