ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ, ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಹಾಗೂ ಅಖಿಲ ಕರ್ನಾಟಕ ಯೂಟ್ಯೂಬ್ ರ್ ಚಾನೆಲ್ ಸಂಘದಿಂದ ರಾಷ್ಟ್ರೀಯ ಪತ್ರಕರ್ತರ ದಿನಾಚರಣೆಯನ್ನು ತಿಪಟೂರಿನ ಭಾಸ್ಕರ್ ಪತ್ರಿಕೆ ಕಚೇರಿ ಆವರಣದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಸಂಘದ ಜಿಲ್ಲಾ ಗೌರವಾಧ್ಯಕ್ಷರು ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾದ ನಿರ್ದೇಶಕರು ಅಖಿಲ ಕರ್ನಾಟಕ ಯೂ ಟೂಬರ್ಸ್ ಚಾನೆಲ್ ಸಂಘದ ರಾಜ್ಯಾದ್ಯಕ್ಷರಾದ ಡಾ! ಭಾಸ್ಕರ್ ರ್ಮಾತನಾಡಿ , ಸರ್ಕಾರ ಪತ್ರಕರ್ತರಿಗೆ ಸಾರಿಗೆ ಸೌಲಭ್ಯ ವಿಮಾ ಸೌಲಭ್ಯ ಪೆನ್ಷನ್ ಇನ್ನು ಮುಂದಾದ ಸೌಲಭ್ಯಗಳನ್ನು ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು ಹಾಗೆ ಕಿಬ್ನಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ರೈತ ಕವಿ ಹಿರಿಯ ಪತ್ರಕರ್ತರು ಆದ ಡಾ! ಶಂಕ್ರಪ್ಪ ಬಳ್ಳೆಕಟ್ಟೆ ಮಾತನಾಡಿ ಪತ್ರಕರ್ತರಿಗೆ ಯಾವುದೇ ತೆರನಾದ ಸುರಕ್ಷತೆ ಇಲ್ಲ ಸಮಾಜದ ಅಂಕುಡೊಂಕು ನಡೆಯುವ ಅನ್ಯಾಯಗಳನ್ನು ಕುರಿತು ನೇರ ನೇರವಾಗಿ ಸಮಾಜಕ್ಕೆ ಮುಟ್ಟಿಸಿದಾಗ ಪತ್ರಕರ್ತರಿಗೆ ಜೀವ ಬೆದರಿಕೆ ಬರುತ್ತವೆ ಅಂತಹ ಸಾಮಾಜಿಕ ಕೆಲಸಗಳನ್ನು ಮಾಡುವ ಪತ್ರಕರ್ತರಿಗೆ ರಕ್ಷಣೆ ಬೇಕು ಎಂದರು , ಕೇ ರಾ ಸಂಘದ ತಾಲೂಕ್ ಖಜಾಂಚಿ ಯಾದ ಶುಭ ವಿಶ್ವಕರ್ಮ ಮಾತನಾಡಿ ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿಗೆ ಇರುತ್ತದೆ ಅಂತಹ ಪತ್ರಕರ್ತರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪತ್ರಕರ್ತರಿಗೆ ಕೊಡಬೇಕು ಎಂದರು , ಕೇ ರಾ ಸಂಘದ ಮತ್ತು ಪ್ರಿಂಟ್ ಮೀಡಿಯಾ &ಸೋಶಿಯಲ್ ಮೀಡಿಯಾದ ತಾಲೋಕ್ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಮಾತನಾಡಿ 4ನೇ ಅಂಗವೇ ಪತ್ರಿಕಾ ರಂಗ ಈ ಸಮಾಜದಲ್ಲಿ ನಡೆಯುವ ಪ್ರತಿಯೊಂದು ವಿಚಾರಧಾರೆಗಳನ್ನು ನೇರವಾಗಿ ಓದುಗರಿಗೆ ಸಾರ್ವಜನಿಕರಿಗೆ ಮುಟ್ಟಿಸುವ ಜವಾಬ್ದಾರಿ ಪತ್ರಕರ್ತರದ್ದು ಕಲೆ ಸಾಹಿತ್ಯ,ವಾಣಿಜ್ಯ,ಸಂಗೀತ, ಸಾಮಾಜಿಕ,ರಾಜಕೀಯ, ವಿದ್ಯೆ, ಉದ್ಯೋಗ ಇನ್ನೂ ಮುಂತಾದ ವಿಚಾರಗಳನ್ನು ತಿಳಿಸುವಲ್ಲಿ ಪತ್ರಕರ್ತರ ಪಾತ್ರ ಬಹು ಮುಖ್ಯವಾದದ್ದು ಹಾಗೆ ಪತ್ರಕರ್ತರಾದವರು ಯಾರಿಗೂ ಹೆದರಿಸಬಾರದು ಯಾರಿಗೂ ಹೆದರಬಾರದು ಎಂದರು ಹಾಗೆ ಇದೇ ಸಂದರ್ಭದಲ್ಲಿ ಪತ್ರಕರ್ತರಾದ ನರಸಿಂಹಮೂರ್ತಿ ಗುರುಗದಹಳ್ಳಿ ಮೋಹನ್ ಕೆರಗೋಡಿ ಇನ್ನು ಮುಂತಾದ ಪತ್ರಕರ್ತರು, ಕುಮಾರಣ್ಣ ಇನ್ನು ಮುಂತಾದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
