Dr.ಭಾಸ್ಕರ್ ನೇತೃತ್ವದಲ್ಲಿ ಶ್ರೀ ಗುರು ದತ್ತಾತ್ರೇಯ ಜಯಂತಿ ಆಚರಣೆ

ಭಾಸ್ಕರ ಪತ್ರಿಕೆ
0

 




ತಿಪಟೂರು: ನಗರದ ಹಾಸನ ಸರ್ಕಲ್ ಭಾಸ್ಕರ ಪತ್ರಿಕೆ ಕಚೇರಿ ಆವರಣದಲ್ಲಿ ಹಿರಿಯ ಪತ್ರಕರ್ತರು ಹಾಗೂ ಸಮಾಜ ಸೇವಕ ಮತ್ತು ಭಾಸ್ಕರ್ ಪತ್ರಿಕಾ ಸಂಪಾದಕರಾದ ಮತ್ತು ಅಖಿಲ ಕರ್ನಾಟಕ ಯೂಟ್ಯೂಬ್ ರಾಜ್ಯಾಧ್ಯಕ್ಷರಾದ ಡಾ! ಭಾಸ್ಕರ್ ಅವರು ಶ್ರೀ ಗುರು ದತ್ತಾತ್ರೇಯ ಜಯಂತಿಯ ಆಚರಣೆ ಮಾಡಲಾಯಿತು. ನಂತರ ಮಾತನಾಡಿ . ದತ್ತಾತ್ರೇಯನ ಆಚರಣೆಗಳಲ್ಲಿ ಸಾಮಾನ್ಯವಾಗಿ ಉಪವಾಸ, ದತ್ತಾತ್ರೇಯನ ವಿಗ್ರಹಕ್ಕೆ ಶ್ರೀಗಂಧದ ಪೇಸ್ಟ್, ಅರಿಶಿನ, ಸಿಂಧೂರ, ಹೂವುಗಳು ಮತ್ತು ದೀಪಗಳೊಂದಿಗೆ ಪೂಜೆ ಮಾಡುವುದು ಸೇರಿವೆ. ಅಲ್ಲದೆ, ಔದುಂಬರ ಮರವನ್ನು ಪೂಜಿಸುವುದು ಮತ್ತು ಪ್ರದಕ್ಷಿಣೆ ಹಾಕುವುದು ವಿಶೇಷ ಫಲ ನೀಡುತ್ತದೆ ಎಂದು ನಂಬಲಾಗಿದೆ. ದತ್ತಾತ್ರೇಯನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಅಂಶ ಹೊಂದಿರುವ ತ್ರಿಮೂರ್ತಿಯಾಗಿದ್ದು, ಮೂರು ತಲೆಗಳು ಮತ್ತು ಆರು ಕೈಗಳನ್ನು ಹೊಂದಿದ್ದಾನೆ ಎಂದು ನಂಬಲಾಗಿದೆ. ಅವನ ಮೂರ್ತಿಯಲ್ಲಿ ಹಸು (ಕಾಮಧೇನು), ಕಲ್ಪವೃಕ್ಷ ಮತ್ತು ನಾಲ್ಕು ನಾಯಿಗಳು (ವೇದಗಳು) ಇರುತ್ತವೆ.ದತ್ತಾತ್ರೇಯ ಜಯಂತಿಯನ್ನು ಆಚರಿಸುವುದರಿಂದ ಜೀವನದಲ್ಲಿ ಉತ್ಸಾಹ, ಸಮೃದ್ಧಿ, ಮತ್ತು ಪೂರ್ವಜರ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತಿಯಲ್ಲಿದ್ದರು.



ವರದಿ: ಮಂಜುನಾಥ್ ಡಿ. ತಿಪಟೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*