ಬೆಂಗಳೂರು: ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಇಂದುಸಂಜೆ ಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ. ಪದ್ಮಾನಾಗರಾಜು ಆಯ್ಕೆಯಾಗಿದ್ದಾರೆ. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸಮಿತಿಯು ಈ ಬಾರಿ ಸಂಸ್ಥೆಯ ಸುವರ್ಣ ಮಹೋತ್ಸವ 2025 ಕಾರ್ಯಕ್ರಮ ಆಚರಿಸುತ್ತಿದ್ದು, ಈ ಸುಸಂದರ್ಭದಲ್ಲಿ ಪ್ರತಿವರ್ಷ ಕೊಡಮಾಡುವ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪದ್ಮಾನಾಗರಾಜು ಅವರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ. ಎಚ್. ಎಲ್.ಎನ್ ರಾವ್ ತಿಳಿಸಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದ್ದಾರೆ.
ಮೇ.22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇವರಿಗೆ KERA ತುಮಕೂರು ಜಿಲ್ಲಾಧ್ಯಕ್ಷ ಡಾ|| ಭಾಸ್ಕರ್, ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಧರಣೇಶ್ ಕುಪ್ಪಾಳು, ತಿಪಟೂರು ತಾಲ್ಲೂಕು ಗೌರವಾಧ್ಯಕ್ಷರಾದ: ಎಸ್. ಗಣೇಶ್, ಅಧ್ಯಕ್ಷರಾದ: ಟಿ. ರಾಜು ಬೆಣ್ಣೆನಹಳ್ಳಿ, ಪ್ರಧಾನ ಕಾರ್ಯದರ್ಶಿ: ಮನು ಎಸ್.ಎಂ, ಹಿರಿಯ ಉಪಾಧ್ಯಕ್ಷರಾದ: ಡಾ|| ಪಿ. ಶಂಕರಪ್ಪ ಬಳ್ಳೇಕಟ್ಟೆ, ಉಪಾಧ್ಯಕ್ಷರಾದ: ಟಿ.ಬಿ ರೇಣುಕಾ ಪ್ರಸಾದ್ (ಸ್ವಾಮಿ ತಿಮ್ಲಾಪುರ) & ಸರ್ವೇಶಾಚಾರ್, ಖಜಾಂಚಿ: ಶ್ರೀಮತಿ ಶುಭ ವಿಶ್ವಕರ್ಮ, ಸಂಘಟನಾ: ಕಾರ್ಯದರ್ಶಿ ಮಂಜು ಗುರುಗದಹಳ್ಳಿ, ಸಹಕಾರ್ಯದರ್ಶಿ: ಮಂಜುನಾಥ.ಡಿ & ತಾಂಡವಮೂರ್ತಿ. ಈ, ಕಾನೂನು ಸಲಹೆಗಾರರಾದ: ಟಿ. ಬಸವರಾಜು, ವಕೀಲರು, ಗೌರವ ಸಲಹೆಗಾರರಾದ: ಡಾ|| ಎಲ್. ಎಂ ವೆಂಕಟೇಶ್, ಉಪನ್ಯಾಸಕರು, ನಿರ್ದೇಶಕರುಗಳಾದ: ಸೂರಜ್ ಹೀರೇಮಠ ಧಾರವಾಡ, ಮಹಾದೇವ.ಪಿ, ಮುಳ್ಳೂರು ಸತೀಶ್, ಶ್ರೀಮತಿ ತ್ರಿವೇಣಿ ಸುಂದರ್ ಅಭಿನಂದನೆ ಸಲದಲಿಸಿದ್ದಾರೆ.

