ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಿಪಟೂರು ತಾ!ಘಟಕದ ವತಿಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಮತ್ತು 2025 26 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ತಿಪಟೂರಿನ ಕಲ್ಪತರು ಗ್ರಾಂಡ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಸಮಾರಂಭದ ಅಧ್ಯಕ್ಷತೆಯನ್ನು ಕೇ ರಾ ಸಂಘದ ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್, ಭಾಸ್ಕರ್ ಪತ್ರಿಕೆ ಮತ್ತು ಭಾಸ್ಕರ್ ಯೂಟ್ಯೂಬ್ ಚಾನಲ್ ನ ಸಂಪಾದಕರು ರವರು ವಹಿಸಿದ್ದರು ಈ ಸಂದರ್ಭದಲ್ಲಿ ಇವರು ಮಾತನಾಡಿ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿಯ ಶುಭಾಶಯ ಕೋರಿ ಸಂವಿಧಾನದ ನಾಲ್ಕನೇ ಅಂಗವೇ ಪತ್ರಿಕಾ ಮಾಧ್ಯಮ, ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರು ಯಾವುದೇ ಲೋಭಕ್ಕೆ ಒಳಗಾಗದೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು, ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಮಾಡುವವರು ವೃತ್ತಿಯಲ್ಲಿ ಯಾರನ್ನು ಎದುರಿಸಬಾರದು ಯಾರಿಗೂ ಎದರಬಾರದು ಎಂದರು, ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಟಿ ರಾಜು ಬೆಣ್ಣೇನಹಳ್ಳಿ ಮಾತನಾಡಿ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 134 ನೇ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ ಈ ಸಮಾಜದ ಓರೆ ಕೋರೆಗಳನ್ನು ಸರಿ ತಪ್ಪುಗಳನ್ನು ದಿನನಿತ್ಯ ನಡೆಯುವ ಸಭೆ ಸಮಾರಂಭಗಳು ದಾರ್ಶನಿಕರು ಇನ್ನು ಮುಂತಾದ ಈ ಪ್ರಪಂಚದ ಪ್ರತಿಯೊಂದು ವಿದ್ಯಮಾನಗಳನ್ನು ವಿಚಾರಗಳನ್ನ ನೇರವಾಗಿ ಓದುಗರಿಗೆ ತಿಳಿಯುವಂತೆ ಮಾಡುವ ಒಂದು ಸಂಪರ್ಕ ಸಾಧನವೇ ಪತ್ರಿಕಾ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಈ ರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಬೇಕು, ನನ್ನನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿ ಈ ತಾಲೂಕಿನ ಸೇವೆಯನ್ನು ಮಾಡಲು ಅತಿಹೆಚ್ಚಿನ ಜವಾಬ್ದಾರಿಯನ್ನು ನನಗೆ ನೀಡಿರುವ ನಿಮಗೆ ತುಂಬಾ ಅಭಾರಿ ಯಾಗಿದ್ದೇನೆ ಎಂದರು ನಿಮ್ಮೆಲ್ಲರ ಸಂಪೂರ್ಣ ಸಹಕಾರ ಕೊಟ್ಟು ಅತೀ ಹೆಚ್ಚಿನ ಕೆಲಸ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು ನಂತರ ರೈತ ಕವಿ ಡಾಕ್ಟರ್ ಶಂಕ್ರಪ್ಪ ಬಳ್ಳೆಕಟ್ಟೆ ಸಂಘ ನಡೆದು ಬಂದ ಹಾದಿ ಮತ್ತು ನಡಾವಳಿಯನ್ನು ತಿಳಿಸಿದರು,ಜಿಲ್ಲಾಧ್ಯಕ್ಷರಾದ ಡಾಕ್ಟರ್ ಭಾಸ್ಕರ್ ಅವರು ಸಂಘದ ಪದಾಧಿಕಾರಿಗಳಿಗೆ ಶುಭಾಶಯ ಕೋರಿ ಈ ಕೆಳಗಿನಂತೆ ಸಂಘದ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು, ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದ
- ತುಮಕೂರು ಜಿಲ್ಲಾಧ್ಯಕ್ಷರಾಗಿ: ಡಾ|| ಭಾಸ್ಕರ್
- ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಧರಣೇಶ್ ಕುಪ್ಪಾಳು
- ತಿಪಟೂರು ತಾಲ್ಲೂಕು ಗೌರವಾಧ್ಯಕ್ಷರಾದ: ಎಸ್. ಗಣೇಶ್
- ಅಧ್ಯಕ್ಷರಾದ: ಟಿ. ರಾಜು ಬೆಣ್ಣೆನಹಳ್ಳಿ
- ಪ್ರಧಾನ ಕಾರ್ಯದರ್ಶಿ: ಮನು ಎಸ್.ಎಂ
- ಹಿರಿಯ ಉಪಾಧ್ಯಕ್ಷರಾದ: ಡಾ|| ಪಿ. ಶಂಕರಪ್ಪ ಬಳ್ಳೇಕಟ್ಟೆ
- ಉಪಾಧ್ಯಕ್ಷರಾದ: ಟಿ.ಬಿ ರೇಣುಕಾ ಪ್ರಸಾದ್ (ಸ್ವಾಮಿ ತಿಮ್ಲಾಪುರ) & ಸರ್ವೇಶಾಚಾರ್
- ಖಜಾಂಚಿ: ಶ್ರೀಮತಿ ಶುಭ ವಿಶ್ವಕರ್ಮ
- ಸಂಘಟನಾ: ಕಾರ್ಯದರ್ಶಿ ಮಂಜು ಗುರುಗದಹಳ್ಳಿ
- ಸಹಕಾರ್ಯದರ್ಶಿ: ಮಂಜುನಾಥ.ಡಿ & ತಾಂಡವಮೂರ್ತಿ. ಈ
- ಕಾನೂನು ಸಲಹೆಗಾರರಾದ: ಟಿ. ಬಸವರಾಜು, ವಕೀಲರು
- ಗೌರವ ಸಲಹೆಗಾರರಾದ: ಡಾ|| ಎಲ್. ಎಂ ವೆಂಕಟೇಶ್, ಉಪನ್ಯಾಸಕರು
- ನಿರ್ದೇಶಕರುಗಳಾದ: ಸೂರಜ್ ಹೀರೇಮಠ ಧಾರವಾಡ, ಮಹಾದೇವ.ಪಿ, ಮುಳ್ಳೂರು ಸತೀಶ್, ಶ್ರೀಮತಿ ತ್ರಿವೇಣಿ ಸುಂದರ್ ಅವರನ್ನು ನೇಮಕ ಮಾಡಲಾಗಿದೆ.
