ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ'ದ ವತಿಯಿಂದ ಮೇ 19ರಂದು 'ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್' ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ

ಭಾಸ್ಕರ ಪತ್ರಿಕೆ
0

 

ಬೆಂಗಳೂರು: ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ'ದ ವತಿಯಿಂದ ಮೇ 19ರಂದು 'ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್' ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪಂಚ ಶಿಲ್ಪಗಳಾದ ಕಾಷ್ಟ ಶಿಲ್ಪ (ಮರ) ಲೋಹ ಶಿಲ್ಪ (ಕಬ್ಬಿಣ) ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ) ಎರಕ ಶಿಲ್ಪ (ಕಂಚು) ಸ್ವರ್ಣಶಿಲ್ಪ (ಚಿನ್ನ-ಬೆಳ್ಳಿ) ಪಂಚವೃತ್ತಿಗಳಲ್ಲಿ ಅಮೋಘ ಸಾಧನೆಗೈದಿರುವ ವಿಶ್ವಕರ್ಮ 5 ಪುರುಷ ಸಾಧಕರಿಗೆ ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್ ವಿಶ್ವಕರ್ಮ ಕಲಾಸಿಂಧು, ವಿಶ್ವಕರ್ಮ ಶಿಲ್ಪಶ್ರೀ ವಿಶ್ವಕರ್ಮ ಕಲಾ ಕೌಸ್ತುಭ ವಿಶ್ವಕರ್ಮ ಕಲಾ ಸೌರಭ ಪ್ರಶಸ್ತಿ ಪುರಸ್ಕಾರ ನೀಡಲಾಗುವುದು ಹಾಗೂ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಕಾನೂನು, ಪ್ರತಿಭೆ, ಕ್ರೀಡೆ, ರಂಗಭೂಮಿ, ಚಲನಚಿತ್ರ ಇತರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶ್ವಕರ್ಮ 5 ಮಹಿಳಾ ಸಾಧಕರಿಗೆ ವಿಶ್ವಕರ್ಮ ಕಲಾ ಸಿಂಧು ವಿಶ್ವಕರ್ಮ ಸಾಹಿತ್ಯ ಸೌರಭ ವಿಶ್ವಕರ್ಮ ಕಲಾ ಸೌರಭ ವಿಶ್ವಕರ್ಮ ಕಲಾಕೌಸ್ತುಭ ವಿಶ್ವಕರ್ಮ ಕಲಾಶ್ರೀ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘವು ನಿರ್ಧರಿಸಿದ್ದು, ಈ ಪ್ರತಿ ಪುರಸ್ಕಾರವು 5 ಪುರುಷ ಸಾಧಕರಿಗೆ ಮತ್ತು 5 ಮಹಿಳಾ ಸಾಧಕರಿಗೆ ನಗದು ಸ್ಮರಣಿಕೆ (ಫಲಕ... ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*