ಕಾಶ್ಮೀರದಲ್ಲಿ 26ಕ್ಕೂ ಹೆಚ್ಚು ಹಿಂದೂಗಳ ಹತ್ಯೆ ಖಂಡಿಸಿ, ಬಿಜೆಪಿ ಮಾಜಿ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಪ್ರತಿಭನೆ.

ಭಾಸ್ಕರ ಪತ್ರಿಕೆ
0

ತಿಪಟೂರು: ಕಾಶ್ಮೀರದ ಪಹಲ್ಲಾವ್ ಎಂಬಲ್ಲಿ ಪ್ರವಾಸಕ್ಕೆ ತೆರಳಿದ ಅಮಾಯಕ ಹಿಂದೂಗಳ ಹತ್ಯೆ ಖಂಡಿಸಿತಿಪಟೂರು ನಗರದ ನಗರಸಭೆ ವೃತ್ತದಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅರಳಿಕಟ್ಟೆ ವೃತ್ತದಿಂದ ಮೌನಮೆರವಣಿಗೆ ನಡೆಸಿ ನಗರಸಭೆ ವೃತ್ತದಲ್ಲಿ ಮೇಣದಬತ್ತಿ ಹಚ್ಚಿ ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು, ನಂತರ ಉಗ್ರರ ಪೈಶಾಕಿಕ ಕೃತ್ಯದ ವಿರುದ್ಧ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು,

ಪ್ರತಿಭಟನಾನಿರತರನ್ನ ಉದೇಶಿಸಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಕಾಶ್ಮೀರದಲ್ಲಿ ಅಮಾಯಕ ಹಿಂದೂಗಳ ಮೇಲೆ ಉಗ್ರಗಾಮಿಗಳು, ನಡೆಸಿರುವ ಪೈಶಾಚಿಕ ಕೃತ್ಯ, ರಣಹೇಡಿ ಕೆಲಸವಾಗಿದೆ, ಉಗ್ರರು ಭಾರತದ ವೀರಸೈನ್ಯವನ್ನು ಎದುರಿಸಲಾಗದೆ, ಅಮಾಯಕರ ಜೀವತೆಗೆದಿದ್ದಾರೆ, ಹಿಂದೂಧರ್ಮವನ್ನ ಗುರಿಯಾಗಿಸಿ ಕೃತ್ಯನಡೆಸಲಾಗಿದೆ,ಇಂತಹ ದುಷ್ಕೃತ್ಯದ ವಿರುದ್ಧ ಸಮಸ್ತ ಹಿಂದೂ ಸಮಾಜ ಸೆಟ್ಟೆದು ನಿಲ್ಲಬೇಕು, ರಣಹೇಡಿಗಳಿಗೆ ಬುದ್ದಿಕಲಿಸಲು ನಮ್ಮ ಸೈನ್ಯ ಸಮರ್ಥವಾಗಿದೆ,ನಮ್ಮ ಸರ್ಕಾರ ಉಗ್ರರಿಗೆ ಉಗ್ರರ ಹಿಂದಿರುವ ಕಿಡಿಗೇಡಿಗಳಿಗೆ ತಕ್ಕಪಾಠ ಕಲಿಸುತ್ತಾರೆ, ನಮ್ಮ ದೇಶದಲ್ಲಿ ಹಿಂದುಗಳನ್ನ ಗುರಿಯಾಗಿಸಿ ನಡೆದಿರುವ ಅಮಾನವೀಯ ಕೃತ್ಯದ ವಿರುದ್ಧ ಇಡೀ ಸಮಾಜ ಎದ್ದುನಿಲ್ಲಬೇಕು, ಉಗ್ರಕೃತ್ಯ ಖಂಡಿಸ ಬೇಕು, ಹಿಂದುಗಳು ಜಾಗೃತರಾಗದಿದ್ದರೆ, ಇಂದು ಕಾಶ್ಮೀರದಲ್ಲಿ ಧರ್ಮದ ಆಧಾರದಲ್ಲಿ ಅಮಾಯಕರ ಹತ್ಯೆಮಾಡಿರುವ ಪಾತಕಿಗಳು ಮುಂದೊಂದುದಿನ ನಮ್ಮ ಊರಿಗೂ ಬರಬಹುದು. ನಮ್ಮ ಮನೆಬಾಗಿಲಿಗು ಬರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ನಗರಸಭೆ ಮಾಜಿ ಅಧ್ಯಕ್ಷ ರಾಮ್ ಮೋಹನ್, ಸದಸ್ಯರಾದ ಶಶಿಕಿರಣ್, ಓಹಿಲಾ ಗಂಗಾಧರ್ ಜಯಲಕ್ಷ್ಮಿ, ಪದ್ಮ ತಿಮ್ಮೆಗೌಡ, ಪ್ರಸನ್ನಕುಮಾರ್.ಮೋಹನ್ ಕುಮಾರ್, ಮುಖಂಡರಾದ ಸಿಂಗ್ರಿದತ್ತಪ್ರಸಾದ್, ಡಿ.ಆರ್ ಬಸವರಾಜು, ವಿಶ್ವದೀಪ್, ಲಿಂಗರಾಜು, ಗುಲಾಬಿ ಸುರೇಶ್, ಬಳ್ಳೆಕಟ್ಟೆ ಸುರೇಶ್, ಹರ್ಷವರ್ಧನ,ರಾಜು,ಮುಂತಾದವರು ಉಪಸ್ಥಿತರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*