ತುಮಕೂರು: ನಗರದ ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತ ಸಂಘದ ನಿರ್ದೇಶಕರ ಮಂಡಳಿಯ ಪದಗ್ರಹ ಸಮಾರಂಭವನ್ನು ಉದ್ದೇಶಿಸಿ ಕೆಪಿಸಿಸಿ ಸದಸ್ಯ ಇಕ್ಬಾಲ್ ಅಹಮದ್ ಮಾತನಾಡಿ ಭಾರತೀಯ ಮುಸ್ಲಿಂಮರು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಒಪ್ಪಿಕೊಂಡು ಇಲ್ಲಿಯ ಕಾನೂನಿನ ಅಡಿಯಲ್ಲಿ ಬದುಕುತ್ತಿದ್ದಾರೆ. ನಾವು ಭಾರತದ ಭೂಮಿಯಲ್ಲಿದ್ದೇವೆ ನೀವು ಇರುವ ಕಡೆ ಗಾಳಿ ನೀರು ಸೇವಿಸುತ್ತಿರುವುದರಿಂದ ಅಂತಹ ರಾಜ್ಯಗಳಿಗೆ ಯಾವುದೇ ದ್ರೋಹ ಮಾಡಬಾರದು ಎಂದು ನಮ್ಮ ಮೌಲಾಲಿಗಳು ಮತ್ತು ಪ್ರವಾದಿಗಳು ನಮಗೆ ಹೇಳಿದ್ದಾರೆ. ನಾವೆಲ್ಲ ಒಂದು ಎಂಬ ಭಾವನೆಯ ಭಾತೃತ್ವದಿಂದ ಬಾಳಬೇಕು ಎನ್ನುವ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ಇದೇ ವೇಳೆ ವಿಧದ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ. ಪತ್ರಿಕಾ ವಿತರಕರಿಗೆ ಎರಡು ಸೈಕಲ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈಎಚ್ ಹುಚ್ಚಯ್ಯ. ರಾಜ್ಯಾಧ್ಯಕ್ಷರಾದ ಪಾವಗಡ ಶ್ರೀರಾಮ್. ಬಿಜೆಪಿ ಮುಖಂಡ ಸ್ಪೂರ್ತಿ ಚಿದಾನಂದ. ಸಂಘದ ರಾಜ್ಯಾಧ್ಯಕ್ಷ ಸಿಡಿ ಕೃಷ್ಣಮೂರ್ತಿ. ತಿಪಟೂರಿನ ಡಾ.ಭಾಸ್ಕರ್ ನಾದುರು ವಾಸುದೇವ ಜಿಕೆ ಕುಮಾರಸ್ವಾಮಿ ಖಜಾಂಚಿ ಮಂಜು ಗುರುಗದಹಳ್ಳಿ. ಮಂಜುನಾಥ್ ಡಿ. ಶುಭ ವಿಶ್ವಕರ್ಮ. ಜಗದೀಶ್.ಮೊದಲಾದವರು ಭಾಗವಹಿಸಿದ್ದರು
