ಬೀದರ್: ಸಿಡಿಲು ಬಡಿದು ಎರಡು ಎಮ್ಮೆಗಳು ಮೃತಪಟ್ಟ ಘಟನೆ ಹುಮನಾಬಾದ್ ತಾಲ್ಲೂಕಿನ ಸುಲ್ತಾನಬಾದ್ ವಾಡಿ ಗ್ರಾಮದಲ್ಲಿ ನಡೆದಿದೆ.
ಮೃತ ಎಮ್ಮೆಗಳು ಸುಲ್ತಾನಬಾದ ವಾಡಿ ಗ್ರಾಮದ ರಾಜಕುಮಾರ್ ಜಮಾದಾರ್ ಅವರಿಗೆ ಸೇರಿವೆ. ಎಮ್ಮೆಗಳನ್ನು ಊರ ಹತ್ತಿರವಿರುವ ರಾಜಕುಮಾರ್ ಅವರ ಹೊಲದ ಮಾವಿನ ಮರಕ್ಕೆ ಕಟ್ಟಲಾಗಿತ್ತು. ನಿನ್ನೆ ಮಧ್ಯಾಹ್ನ ಎಮ್ಮೆಗಳ ಮೇಲೆ ಸಿಡಿಲು ಬಿದ್ದು ಎಮ್ಮೆಗಳು ಮೃತಪಟ್ಟಿದ್ದಾವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹಳ್ಳಿಖೇಡ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

