ಭಯೋತ್ಪಾದಕರ ಕೃತ್ಯ ಖಂಡಿಸಿ ಆಕ್ರೋಶ.

ಭಾಸ್ಕರ ಪತ್ರಿಕೆ
0


ತಿಪಟೂರು: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿ ನಗರಸಭಾ ವೃತ್ತದ ಬಳಿ ಮೇಣದ ಬತ್ತಿ ಹಚ್ಚಿ ಮೃತರ ಕುಟುಂಬಕ್ಕೆ ಶ್ರದ್ಧಾಂಜಲಿ ಕೋರಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಿಪಟೂರು ಅಧ್ಯಕ್ಷರಾದ ಅಲ್ಲಾಭಕ್ಕಾಶ್ ಪಹಲ್ಗಾಮ್ ಉಗ್ರಗಾಮಿಗಳು ಅಮಾಯಕರನ್ನ ಹತ್ಯೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಕೃತ್ಯವಾಗಿದೆ,ಬಯೋತ್ಪಾದನೆಗೆ ಜಾತಿ ಧರ್ಮ ಇರುವುದಿಲ್ಲ, ದುಷ್ಟತನ, ಹಾಗೂ ಧರ್ಮದ ಅಮಲನ್ನ ತಲೆಗೇರಿಸಿಕೊಂಡವರು,ಈ ರೀತಿಯ ಹೀನ ಕೃತ್ಯ ಮಾಡುತ್ತಾರೆ,ಯಾರೋ ದುಷ್ಟರು ಮಾಡಿರುವ ಕೃತ್ಯವನ್ನ ಎಲ್ಲಾ ಮುಸಲ್ಮಾನರ ತಲೆಗೆ ಕಟ್ಟುವ ಕುತಂತ್ರ ನಡೆಯುತ್ತಿದೆ,ಇತ್ತಿಚಿನ ದಿನಗಳಲ್ಲಿ ಧರ್ಮದ ಆಧಾರದಲ್ಲಿ ಅಮಾಯಕರ ಹತ್ಯೆ ಹಾಗೂ ಸಮಾಜವನ್ನ ವಿಭಜನೆ ಮಾಡುವ ಹುನ್ನಾರದ ಬಗ್ಗೆ ನಾಗರೀಕ ಸಮಾಜ ಎಚ್ಚರ ವಹಿಸಬೇಕು, ಕೇಂದ್ರ ಸರ್ಕಾರ ಭದ್ರತಾ ವೈಪಲ್ಯದಿಂದ ಉಗ್ರಕೃತ್ಯ ನಡೆದಿದೆ ಎಂದರು.

ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ. ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿ ಅತ್ಯಂತ ಹೀನ ಕೃತ್ಯವಾಗಿದ್ದು. ಇದಕ್ಕೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಉತ್ತರ ನೀಡಬೇಕು ಭಯೋತ್ಪಾದನೆಯ ವಿರುದ್ಧ ಜಾಗತಿಕ ಸಮುದಾಯ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದರು

ಈ ಸಂದರ್ಭದಲ್ಲಿ ರೈತ ಮುಖಂಡ ಜಯನಂದಯ್ಯ, ರಂಗಾಪುರ ಚನ್ನಬಸವಣ್ಣ, ದೇವರಾಜು ತೀಮ್ಲಾಪುರ, ಸಾಹಿತಿ ಗಂಗಾಧರ್, ಕೃಷ್ಣಮೂರ್ತಿ ಬಿಳಿಗೆರೆ ಅಲ್ಲಾಭಕಾಷ್, ಕೃಷ್ಣಮೂರ್ತಿಶ್ರೀಕಾಂತ್ ಕೆಳಹಟ್ಟಿ, ರೇಣುಕರಾಧ್ಯ,ಕಾಂಗ್ರೇಸ್ ಅಲ್ಪ ಸಂಖ್ಯಾತರ ಘಟಕದ ನಗರಾಧ್ಯಕ್ಷ ಶಫೀ ಉಲ್ಲಾ, ಷರೀಪ್,ಸಮೀ ಉಲ್ಲಾ,ಅಲ್ಲಾಭಕ್ಷು,ಕಾ.ಸಾ ಪ ಅಧ್ಯಕ್ಷ ಬಸವರಾಜು, ಮಂಜಪ್ಪ,ಪ್ರಾಂತರೈತಸಂಘದ ಮಹಿಳಾ ಅಧ್ಯಕ್ಷೆ ರಾಜಮ್ಮ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪರ್ವೇಜ್.ಮುಖಂಡರಾದ ಮಲ್ಲಿಕಾರ್ಜುನ್, ನಾಗರಾಜು, ಪ್ರಕಾಶ್. ಮತ್ತಿತ್ತರು ಹಾಜರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*