ತುಮಕೂರು: ಸಿಡಿಲು ಬಡಿದು ಗುಡಿಸಲು ಭಸ್ಮವಾದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಯರದಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ ಎಂಬುವರಿಗೆ ಸೇರಿದ ಗುಡಿಸಲು ಸುಟ್ಟು ಭಸ್ಮವಾಗಿದೆ. ಅವರು ಕಡಲೆ ಬಣವಿಗೆ ಟಾರ್ಪಲ್ ಹಾಕಲು ಹೊರಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಡಿಸಲಿನಲ್ಲಿ ಇಟ್ಟಿದ್ದ ಮೂರು ಲಕ್ಷ ಹಣ, ಧವಸ, ಧಾನ್ಯ, ಮೊಬೈಲ್, ಜಮೀನು ಹಾಗೂ ಮನೆ ನಿರ್ಮಾಣದ ಡಾಂಕ್ಯೂಮೆಂಟ್ ಬೆಂಕಿಗಾಹುತಿಯಾಗಿದೆ.
ಗ್ರಾಮಪಂಚಾಯ್ತಿಯಿಂದ ಮನೆ ಮಂಜೂರಾಗಿತ್ತು. ಹೀಗಾಗಿ ಮಂಜುನಾಥ್ ಮನೆ ನಿರ್ಮಾಣ ಮಾಡುವ ಸಿದ್ಧತೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

