ಪಾಕಿಸ್ತಾನದ ಎಲ್ಲ ನ್ಯೂಸ್, ಯೂಟ್ಯೂಬ್ ಚಾನೆಲ್ ಗಳು ಭಾರತದಲ್ಲಿ ಬ್ಯಾನ್!

ಭಾಸ್ಕರ ಪತ್ರಿಕೆ
0

ಭಾರತದಲ್ಲಿ ಪಾಕಿಸ್ತಾನದ ಎಲ್ಲಾ ನ್ಯೂಸ್ ಚಾನೆಲ್ ಗಳು, ಯೂಟ್ಯೂಬ್ ಚಾನೆಲ್ ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ.  ತಪ್ಪು, ಸುಳ್ಳು ಮಾಹಿತಿ, ದಾರಿ ತಪ್ಪಿಸುವ ಮಾಹಿತಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಭಾರತದ ಸೇನೆ, ಕೇಂದ್ರ ಸರ್ಕಾರದ ವಿರುದ್ಧ ದಾರಿ ತಪ್ಪಿಸುವ ಮಾಹಿತಿಯನ್ನು ಪಾಕಿಸ್ತಾನ ಪ್ರಸಾರ ಮಾಡುತ್ತಿದೆ. ಪಾಕ್ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ​ಗೆ ಸೇರಿದ ಯೂಟ್ಯೂಬ್ ಚಾನಲ್ ಕೂಡ ಬ್ಯಾನ್ ಆಗಿದೆ.

ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದೆ. ಪಾಕಿಸ್ತಾನದಲ್ಲಿರುವ ಎಲ್ಲಾ ಭಾರತೀಯರೂ ವಾಪಸ್ ಬರಲು ಮೇ 1 ಡೆಡ್ ​ಲೈನ್. ಇನ್ನು, ಭಾರತದಲ್ಲಿರುವ ಪಾಕಿಸ್ತಾನಿಯರು ಭಾರತದಿಂದ ತೆರಳಲು ನೀಡಲಾಗಿರುವ ಡೆಡ್​ ಲೈನ್​ ನಿನ್ನೆ ಮುಕ್ತಾಯಗೊಂಡಿದೆ.

ದೀರ್ಘಾವಧಿ ವೀಸಾದ ಮೇಲಿರುವ ಪಾಕಿಸ್ತಾನಿಯರಿಗೆ ವಿನಾಯತಿ ನೀಡಲಾಗಿದೆ. ಅಲ್ಲದೇ, ಸಿಂಧುನದಿ ಒಪ್ಪಂದ ಅಮಾನತು ಸೇರಿದಂತೆ ಉಗ್ರ ಪೋಷಕರ ಪಾಕ್ ವಿರುದ್ಧ ಅನೇಕ ದಿಟ್ಟ ನಿರ್ಧಾರಗಳನ್ನು ಭಾರತ ತೆಗೆದುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*