ತಿಪಟೂರು: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಹಾಗೂ ಭಯೋತ್ಪಾದಕರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ, ತಿಪಟೂರು ತಾಲೂಕು ಹಿಂದುಪರ ಸಂಘಟನೆಗಳ ಒಕ್ಕೂಟದಿಂದ ಕರೆನೀಡಿದ ತಿಪಟೂರುಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ನಗರದ ನಾಗರಿಕರು ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಬೆಂಬಲ ಸೂಚಿಸಿದರು,
ನಗರದ ಬಿ.ಎಚ್ ರಸ್ತೆ ರೈಲ್ವೆ ಸ್ಟೇಷನ್ ರಸ್ತೆ, ಹಾಲ್ಕುರ್ಕೆ ರಸ್ತೆ, ಎ.ಪಿ.ಎಂ.ಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ಬಹುತೇಕ ವಹಿವಾಟು ಸ್ತಬ್ಧವಾಗಿತ್ತು. ರಸ್ತೆಗಳಲ್ಲಿ ವಾಹನಗಳು ಹಾಗೂ ಜನಸಂಚಾರ ಹೊರತುಪಡಿಸಿದರೆ ಶಾಲಾ ಕಾಲೇಜುಗಳು, ಅಗತ್ಯ ಸೇವೆಗಳನ್ನ ಹೊರತುಪಡಿಸಿ,ಯಾವುದೇ ವಹಿವಾಟು ನಡೆಯಲಿಲ್ಲ. ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು ಭಯೋತ್ಪಾದಕ ಪೋಷಣೆ ಮಾಡುತ್ತಿರುವ ಪಾಕಿಸ್ತಾನ ಹಾಗೂ ಉಗ್ರಗಾಮಿಗಳ ವಿರುದ್ಧ ಧಿಕ್ಕಾರ ಆಕ್ರೋಶ ವ್ಯಕ್ತಪಡಿಸಿದರು. ತಿಪಟೂರು ಗ್ರಾಮದೇವತೆ ಕೆಂಪಮ್ಮ ದೇವಿ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕೋಡಿ ಸರ್ಕಲ್ ದೊಡ್ಡಪೇಟೆ ಬಿಎಚ್ ರಸ್ತೆ ಮೂಲಕ ಸಾಗಿ ನಗರಸಭಾ ವೃತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಮಾತನಾಡಿ, ಕಾಶ್ಮೀರದ ಪಹಲ್ಯಾಮ್ ನಲ್ಲಿ ಅಮಾಯಕ ಹಿಂದೂಗಳ ಮೇಲೆ ನಡೆದಿರುವ ಭಯೋತ್ಪಾದಕ ದಾಳಿ ತೀವು ಖಂಡನೀಯವಾಗಿದೆ, ಪ್ರವಾಸಕ್ಕೆ ತೆರಳಿದ್ದ ಅಮಾಯಕರ ಹಿಂದೂಗಳ ಮೇಲೆ ಪಾಕಿಸ್ತಾನ ಪ್ರಯೋಜಿತ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸುವ ಮೂಲಕ ಭಾರತದ ಸಮಸ್ತ ಹಿಂದುಗಳಿಗೆ ಬೆದರಿಕೆ ಹಾಕಿದ್ದಾರೆ.
ರಾಷ್ಟ್ರೀಯತೆ ವಿಚಾರ ಬಂದಾಗ ನಾವೆಲ್ಲರೂ ಒಂದು ಎಂಬುದನ್ನ ಪ್ರತಿಯೊಬ್ಬರು ಒಗ್ಗಟ್ಟಿನಿಂದ ನಿರೂಪಿಸಬೇಕಿದೆ, ಸಮಸ್ತ ಭಾರತೀಯರು ದೇಶದ ರಕ್ಷಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈಗೆ ಅಧಿಕಾರ ನೀಡಿದ್ದೇವೆ, ನಾವು ಕೊಟ್ಟ ಅಧಿಕಾರವನ್ನು ಸಮರ್ಥವಾಗಿ ಬಳಸಿ, ಭಾರತದ ಭಾಗದಂತಿರುವ ಪಿಓಕೆಯನ್ನ ವಶಪಡಿಸಿಕೊಳ್ಳಬೇಕು, ಭಯೋತ್ಪಾದಕರನ್ನು ಪೋಷಣೆ ಮಾಡಿ ಹಿಂದುಗಳಿಗೆ ಹಾಗೂ ಭಾರತಕ್ಕೆ ಸದಾ ತೊಂದರೆ ನೀಡುತ್ತಿರುವ ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಉಗ್ರಗಾಮಿಗಳು ಹಾಗೂ ಉಗ್ರ ಪೋಷಕರನ್ನ ನಾಶಗೊಳಿಸಬೇಕು. ಭಾರತದೊಂದಿಗೆ ಭಾರತೀಯ ಸೈನ್ಯದೊಂದಿಗೆ ನಾವೆಲ್ಲರೂ ಸದಾ ಬೆಂಬಲವಾಗಿರುತ್ತೇವೆ, ಇಡೀ ಜಗತ್ತಿನಲ್ಲಿ ಹಿಂದುಗಳಿಗಾಗಿ ಇರುವ ಏಕೈಕ ರಾಷ್ಟ್ರವೆಂದರೆ ಭಾರತ ಮಾತ್ರ ಆದರೆ ಮುಸಲ್ಮಾನರು, ಕ್ರೈಸ್ತ ಧರ್ಮೀಯರಿಗೆ ಜಗತ್ತಿನ ಹಲವಾರು ದೇಶಗಳಿವೆ.
ಹಿಂದೂ ರಾಷ್ಟ್ರವಾದ ಭಾರತವನ್ನು ನಾವು ರಕ್ಷಣೆ ಮಾಡಿ ಸುಭದ್ರ ಗೊಳಿಸದಿದ್ದರೆ ಇಡೀ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ, ದೇಶದ ಪ್ರತಿಯೊಬ್ಬ ಹಿಂದೂ ಸಹ ಎಚ್ಚೆತ್ತುಕೊಳ್ಳಬೇಕು ಹಿಂದೂ ಪರವಾದ ಸರ್ಕಾರವಿರುವ ಕೇಂದ್ರ ಸರ್ಕಾರ ತಕ್ಷಣ ಯುದ್ಧ ಸಾರಿ ಭಯೋತ್ಪಾದಕತೆಯನ್ನು ಸಂಪೂರ್ಣ ನಾಶಗೊಳಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಪಹಲ್ಯಾಮ್ ನಲ್ಲಿ ಪ್ರವಾಸಕ್ಕೆ ತೆರಳಿದ ಅಮಾಯಕರ ಹಿಂದೂಗಳ ಮೇಲೆ ಪಾಕಿಸ್ಥಾನ ಪ್ರಯೋಜಿತ ಉಗ್ರಗಾಮಿಗಳು, ಗುಂಡಿನದಾಳಿ ನಡೆಸಿ ಹತ್ಯೆ ಮಾಡಿರುವುದು ತೀವ್ರಖಂಡನೀಯ, ಭಾರತಸರ್ಕಾರ ಭಯೋತ್ಪಾದಕರ ಹಾಗೂ ಭಯೋತ್ಪಾದಕರ ಪೋಷಣೆ ಮಾಡುತ್ತಿರುವ ಪಾಕಿಸ್ಥಾನದ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಧರ್ಮದ ಆಧಾರದಲ್ಲಿ ದಾಳಿ ಮಾಡಿ ಅಮಾಯಕರ ಹತ್ಯೆಮಾಡಿರುವ ಹಿಂದೂಗಳಿಗೆ ಎಚ್ಚರಿಕೆ ಗಂಟೆಯಾಗಿದೆ, ಭಾರತದದಲ್ಲಿ ಹಿಂದೂಗಳು ಒಗ್ಗಾಟಾಗದಿದರೆ, ಅಪಾಯಕಟ್ಟಿಟಬುತ್ತಿ ಎಂಬುದನ್ನ ಮರೆಯಬಾರದು, ನಮ್ಮ ದೇಶಕ್ಕೆ ಎದುರಾಗುವ ದುಷ್ಟರ ಸಂಹಾರಕ್ಕೆ ನಮ್ಮ ಸೈನ್ಯ ಸಶಕ್ತವಾಗಿದೆ, ಭಾರತಸರ್ಕರ ತಕ್ಷಣ ಕಠಿಣ ಕ್ರಮವಹಿಸಿ ಭಯೋತ್ಪಾದಕರ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು. ಕುಪ್ಪುರು ತಮ್ಮಡಿಹಳ್ಳಿ ವಿರಕ್ತಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ ಕಾಶ್ಮೀರದ ಪಹಲ್ಲಾಮ್ ನಲ್ಲಿ ಅಮಾಯಕರ ಮೇಲೆ ದಾಳಿಮಾಡಿ ಹತ್ಯೆ ಮಾಡಿರು ಕೃತ್ಯ ಶಾಂತಿಪ್ರಿಯ ಭಾರತವನ್ನ ಕೆಣಕುವ ದುಸಾಹಸ ಮಾಡಿದ್ದಾರೆ, ಸರ್ಕಾರ ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು, ಧರ್ಮದ ಆಧಾರದಲ್ಲಿ ಹತ್ಯೆ,ಹಿಂದೂಸಮಾಜಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಸರ್ಕಾರ ಉಗ್ರಗಾಮಿಗಳನ್ನ ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.
ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಖ್ಯಾತ ವಕೀಲರಾದ ಶ್ರೀಶ, ಜೆಡಿಎಸ್ ಮುಖಂಡ ಕೆ.ಟಿಶಾಂತಕುಮಾರ್,ಮಡೇನೂರು ವಿನಯ್.ಸಂಸ್ಕಾರ ಭಾರತಿ ಅಧ್ಯಕ್ಷ ಭವಾನಿಶಂಕರ್, ಆನಂದ್, ಮಾಜಿ ನಗರಸಭಾ ಸದಸ್ಯ ರಾಮ್ ಮೋಹನ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಪ್ರಸನ್ನ ಕುಮಾರ್,ಸದಸ್ಯರಾದ ಸಂಗಮೇಶ್, ತರಕಾರಿ ಗಂಗಾಧರ್, ಖ್ಯಾತವೈದ್ಯರಾದ ಡಾ//ಶ್ರೀಧರ್,ಡಾ//ವಿವೇಚನ್,ಸುದರ್ಶನ್,ಆರ್.ಎಸ್ ಮನೋಹರ್,ಮುಂತಾದವರು ಉಪಸ್ಥಿತರಿದರು.





