ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್: ಮನೆಯ ಕೂಗಲತೆ ದೂರದಲ್ಲೇ ಹತ್ಯೆಗೆ ಸ್ಕೆಚ್!

ಭಾಸ್ಕರ ಪತ್ರಿಕೆ
0

ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆಯ ಬಳಿಯೇ ಫೈರಿಂಗ್ ನಡೆದಿದ್ದು, ಪರಿಣಾಮವಾಗಿ ರಿಕ್ಕಿ ರೈ ಮೂಗು, ಕೈಗೆ ಗುಂಡೇಟು ತಗುಲಿದೆ.

ಯಾವಾಗಲು ರಿಕ್ಕಿ ರೈ ವಾಹನ ಚಲಾಯಿಸುತ್ತಿದ್ದರು. ಹೀಗಾಗಿ ದುಷ್ಕರ್ಮಿಗಳು ಡ್ರೈವರ್ ಸೀಟ್ ನ್ನು ಟಾರ್ಗೆಟ್ ಮಾಡಿ ಫೈರಿಂಗ್ ಮಾಡಿದ್ದರು. ಆದ್ರೆ, ರಿಕ್ಕಿ ರೈ ಹಿಂದಿನ ಸೀಟಿನಲ್ಲಿ ಕುಳಿತಿದ್ದರಿಂದ ಮೂಗು ಮತ್ತು ಕೈಗೆ ಗುಂಡೇಟು ತಗುಲಿದೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮ್ಮ ಮನೆಯ ಕೂಗಲತೆ ದೂರದಲ್ಲೇ ಈ ಘಟನೆ ನಡೆದಿದೆ. ರಾತ್ರಿ 11:30ರ ಸುಮಾರಿಗೆ ಈ ಘಟನೆ ನಡೆದಿದೆ. 2 ದಿನಗಳ ಹಿಂದೆಯಷ್ಟೇ ರಿಕ್ಕಿ ರೈ ರಷ್ಯಾದಿಂದ ಬಂದಿದ್ದರು. ನಿನ್ನೆ ರಾಮನಗರ ತಾಲೂಕಿನ ಬಿಡದಿ ಮನೆಯಿಂದ ತಡರಾತ್ರಿ ಫಾರ್ಚುನರ್ ಕಾರ್ ನಲ್ಲಿ ಬೆಂಗಳೂರಿಗೆ ಹೊರಟಿದ್ದ ವೇಳೆ 70 ಎಂಎಂ ಬುಲೆಟ್ ನ ಶಾಟ್ ಗನ್ ಬಳಸಿ ಫೈರಿಂಗ್ ಮಾಡಲಾಗಿದೆ.

ಫೈರಿಂಗ್ ವೇಳೆ ಕಾರು ಚಾಲಕ ಬಸವರಾಜು ಬಗ್ಗಿದ್ದರಿಂದಾಗಿ ಅವರು ಕೂದಲೆಳೆ ಅಂತರದಲ್ಲಿ ಗುಂಡೇಟಿನಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*