ಅಂಬೇಡ್ಕರ್ ಎಲ್ಲರಿಗೂ ಬದುಕುವ ಹಕ್ಕನ್ನು ಒದಗಿಸಿಕೊಟ್ಟರು: ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ

ಭಾಸ್ಕರ ಪತ್ರಿಕೆ
0

ಪಾವಗಡ: ತಾಲ್ಲೂಕಿನ ಇಂದ್ರಬೆಟ್ಟ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶಕ್ಕೆ ಅಂಬೇಡ್ಕರ್ ಅವರ ಕೊಟ್ಟ ಕೊಡುಗೆ ಅಪಾರವಾದದ್ದು. ಅವರ ಸಾಧನೆ ಒಂದು ಮಾರ್ಗದರ್ಶಿಯಾದದ್ದು, ಎಲ್ಲರಿಗೂ ಬದುಕುವ ಹಕ್ಕನ್ನು ಒದಗಿಸಿಕೊಟ್ಟರು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ತುಮಕೂರಿನ ಹೋರಾಟಗಾರರಾದ ರಂಗದಾಮಯ್ಯ ಜೆ.ಸಿ. ಅವರು ಮಾತನಾಡುತ್ತಾ, ಅಂಬೇಡ್ಕರ್ ಅವರನ್ನು ವಿಶ್ವವೇ ಜ್ಞಾನದ ಸಂಕೇತವಾಗಿ ಗ್ರಹಿಸಿರುವಾಗ ಭಾರತವು ಇನ್ನೂ ಜಾತಿಗ್ರಸ್ಥವಾಗಿಯೇ ಕಾಣುತ್ತಿರುವುದು ದುರಂತ ಎಂದರು.

ಇಂದು ದಲಿತ ಸಮುದಾಯವು ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ಮತ್ತಷ್ಟು ಶೋಷಣೆಗೆ ಒಳಗಾಗುತ್ತಾರೆ. ಆದ್ದರಿಂದ ದೇವರು ಜಾತ್ರೆ ಉತ್ಸವಗಳ ಆಚರಣೆಯನ್ನು ಬಿಡಬೇಕು. ಸೀರಿಯಲ್ ನೋಡುವುದನ್ನು ತ್ಯಜಿಸಬೇಕು. ಮಕ್ಕಳಿಗೆ ಒಳ್ಳೇ ಉತ್ತಮ ಶಿಕ್ಷಣ ಕೊಡಿಸಬೇಕು. ಗುಡಿಸಲುಗಳಲ್ಲಿ ರಾಜರು ಹುಟ್ಟುವ ಕಾಲ ಇದಾಗಿದೆ. ಇದರಿಂದ ನನ್ನ ಜನ ರಾಜರಾಗಿ ದೇಶ ಆಳುವುದು ಕನಸು ನನಸಾಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ಸಮಯದಲ್ಲಿ ಇಂದ್ರಬೆಟ್ಟ ಗ್ರಾಮದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಯನ್ನು ವಿತರಿಸಿದರು. ಭವಿಷ್ಯದಲ್ಲಿ ಉತ್ತಮ ಜ್ಞಾನವಂತರಾಗಬೇಕು ಎಂದು ಆಶಿಸಿದರು.

ರವಿ ಪಾರ್ವತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ.ಕುಮಾರ್ ಇಂದ್ರಬೆಟ್ಟ, ಡಾ.ಪ್ರೇಮ ಜ್ಯೋತಿ, ಕತಿಕ್ಯಾತನಹಳ್ಳಿ ನರಸಿಂಹಪ್ಪ, ಮಾರಪ್ಪ ದೊಡ್ಡಳ್ಳಿ, ಕಾರ್ಪೆಂಟರ್ ರಾಮಾಂಜಿನಪ್ಪ, ವೈ.ಎನ್.ಹೊಸಕೋಟಿ ಮಾರಪ್ಪ, ನಾರಾಯಣಪ್ಪ, ರವಿ ಐ. ಹೆಚ್. ಶಿವಕುಮಾರ್, ರಾಜು ಐ.ಕೆ. ಹನುಮಂತರಾಯ, ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*