ತಿಪಟೂರು: ಹಾಸನ ಸರ್ಕಲ್ ಕಲ್ಪತರು ಗ್ರಾಂಡ್ ನಲ್ಲಿ 134 ನೇ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ನಮ್ಮೂರ ಸನ್ಮಾನ ಕಾರ್ಯಕ್ರಮವನ್ನು ತಿಪಟೂರು ವಾಯ್ಸ್ ಮತ್ತು ಬಳಗದ ವತಿಯಿಂದ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತ ರತ್ನ ವಿಶ್ವಮಾನವ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಮುದಾಯ ಆರೋಗ್ಯ ಕೇಂದ್ರದ ಡಾ.ಶಿಲ್ಪ ರವರು ಉದ್ಘಾಟಿಸಿ ಮಾತನಾಡಿ ಸಂವಿಧಾನ ಮೂಲಕ ಸರ್ವರಿಗೂ ಸಮಾನವಾದ ಹಕ್ಕನ್ನು ಬರೆದು ಕೊಟ್ಟಂತಹ ಆ ಮಹಾನ್ ಪುಣ್ಯಾತ್ಮಲಿಗೆ ನಾನೆಂದೂ ಚಿರಋಣಿ ಇಂದು ನಾನು ಹೆಣ್ಣಾಗಿ ಇಷ್ಟು ಧೈರ್ಯವಾಗಿ ಕಾರ್ಯಕ್ರಮದಲ್ಲಿ ಹೀಗೆ ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಅವರು ಕೊಟ್ಟಂತ ಭಿಕ್ಷೆಯ ಹೊರತು ಬೇರೆ ಯಾವುದೂ ಅಲ್ಲ ಎಂದು ಅವರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಸ್ಮರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಎಂ ಕೆ ಲತಾ ರವರು ಮಾತನಾಡಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕ ನಾವು ಸದೃಢರಾಗ ಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಜಾಹಿರಾತು:
ಮುಖ್ಯ ಅತಿಥಿಯಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಪ್ರಧಾನ ಕಾರ್ಯದರ್ಶಿಯಾದ ಪಟ್ಟಾಭಿರಾಮ ಟಿಕೆ ರವರು ಅಂಬೇಡ್ಕರ್ ಅವರ ಜೀವನದ ನೋವು ನಲಿವುಗಳನ್ನು ಅವರು ಪಟ್ಟಂತ ಶ್ರಮ ಅವರ ಗುರಿ ಉದ್ದೇಶದ ಮಾರ್ಗದರ್ಶನಗಳನ್ನು ನೀಡಿ ಇಂತಹ ಮಹಾ ಪುಣ್ಯಾತ್ಮ ನಮಗೆ ಸಿಕ್ಕಿದ್ದು ನಾವೇ ಧನ್ಯರು ಎಂದು ಮಾನವತವಾದಿ ಸಮಾನಾರ್ಥವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದರು. ಕಲ್ಪತರು ಗ್ರಾಂಡ್ ಹೋಟೆಲ್ ಮಾಲೀಕರಾದ ನಿಜಗುಣ ರವರು ಮಾತನಾಡಿ ಅಂಬೇಡ್ಕರ್ ರವರ ಕೊಡುಗೆ ನಮ್ಮ ಭಾರತಕ್ಕೆ ಅಪಾರವಾದದ್ದು ಹಾಗಾಗಿ ಅವರನ್ನು ಎಂದಿಗೂ ಸಹ ಸ್ಮರಿಸುತ್ತಾ ಇದ್ದೇವೆ ಹಾಗಾಗಿ ಎಲ್ಲರೂ ಸಹ ಸಮಾನವಾದ ಮನೋಭಾವವನ್ನು ಇಟ್ಟುಕೊಂಡು ಜೀವನ ನಡೆಸಬೇಕು ನಾವುಗಳು ಸಹ ಅವರ ಆದರ್ಶಗಳನ್ನ ಪಾಲಿಸಿ ಬೇಕೆಂದರು. ಬಳ್ಳಕಟ್ಟೆ ಡಾ. ಶಂಕರಪ್ಪನವರು ಗಣ್ಯರಿಗೆ ಸ್ವಾಗತ ಕೋರಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಭಾಸ್ಕರ್ ಹಿರಿಯ ಸಂಪಾದಕರು, ಶ್ರುತಿ ಇಂದಿರಾ ರಂಗಭೂಮಿ ಶಿಕ್ಷಕರು ಮೈಸೂರು ರಂಗಾಯಣ, ಡಾಕ್ಟರ್ ವೆಂಕಟೇಶ್ ಉಪನ್ಯಾಸಕರು, ಎಂ ಆರ್ ಸೋಮಶೇಖರ್, ಎಂ ಕೆ ಮಂಜುಳಾ ಸೋಮಶೇಖರ್, ಪ್ರಶಾಂತ್ ಕರಿಕೆರೆ ಪತ್ರಕರ್ತರು, ಹಾಗೂ ದಲಿತ ಮುಖಂಡರಿಗೂ ಸನ್ಮಾನ ಮಾಡಲಾಯಿತು. ಈ ಎಲ್ಲಾ ಕಾರ್ಯಕ್ರಮದ ಪ್ರಮುಖ ಪಾತ್ರರಾದ ನವೀನ್ ಕುಮಾರ್ ಪತ್ರಕರ್ತರು, ಡಾ! ಎಸ್. ಕೆ. ಮಂಜುನಾಥ್ ಉಪನ್ಯಾಸಕರು ತಿಪಟೂರು ವಾಯ್ಸ್ ಭಾಸ್ಕರ್ ಪತ್ರಿಕೆ, ಕಾರ್ಯಕ್ರಮದ ಇನ್ನೂ ಅನೇಕ ಗಣ್ಯರು, ಪತ್ರಕರ್ತರು, ಉಪಸ್ಥಿತಿಯಲ್ಲಿದ್ದು ಯಶಸ್ವಿಗೊಳಿಸಿದರು.
ವರದಿ: ಮಂಜುನಾಥ್. ಡಿ, ತಿಪಟೂರು
