ಕೇವಲ ಪ್ರತಿಮೆ ಅಲ್ಲ ಅದೊಂದು ಪ್ರವಾಸೋದ್ಯಮ ತಾಣ ಣವಾಗಬೇಕು: ಶ್ರೀ ಶ್ರೀ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಷಡಕ್ಷರಿ ಮಠ

ಭಾಸ್ಕರ ಪತ್ರಿಕೆ
0

ತಿಪಟೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬೃಹತ್ ಪ್ರತಿಮೆ ನಿರ್ಮಾಣವನ್ನು ಮಾಡುವುದಕ್ಕೆ ಘೋಷಣೆ ಮಾಡಿದ್ದು  ತಿಪಟೂರಿನ ಕರ್ನಾಟಕ ಭೀಮ್ ಸೇನೆಯು ವತಿಯಿಂದ ಶ್ರೀ ಷಡಕ್ಷರಿ ಮಠ ದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಯಿಗಿತ್ತು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಷಡಕ್ಷರಿ ಮಠದ   ಶ್ರೀ ಶ್ರೀ ಶ್ರೀ ರುದ್ರಮುನಿ ಮಹಾ ಸ್ವಾಮೀಜಿಯವರು ತೆಲಂಗಾಣದಲ್ಲಿ 206ಅಡಿ ಆಂಧ್ರಪ್ರದೇಶದಲ್ಲಿ 205ಅಡಿ ಪ್ರತಿಮೆ ನಿರ್ಮಾಣ ಮಾಡಿದ್ದಾರೆ ಅದೇ ಮಾದರಿಯಲ್ಲಿ ನಮ್ಮ ಕರ್ನಾಟಕ ದಲ್ಲೂ ಸಹ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಘೋಷಣೆ ಮಾಡಿದ್ದು ಹೆಮ್ಮೆಯ ಸಂಗತಿ ಕೇವಲ ಪ್ರತಿಮೆ ಅಲ್ಲ ಅದೊಂದು ಪ್ರವಾಸೋದ್ಯಮ ತಾಣವಾಗಿ ಮಾಡಿದ್ರೆ ಜನರುಗಳಿಗೆ ಇನ್ನು ಒಳಿತಾಗುತ್ತದೆ  ಮತ್ತು  ಅಂಬೇಡ್ಕರ್ ಅವರ ಜೀವನದ ಪುಸ್ತಕಗಳನ್ನು ಇಟ್ಟು ಜಾರುಗಳಿಗೆ ಓದೋಗೋದಕ್ಕೆ ಅವಕಾಶವನ್ನ ಮಾಡಿ ಪ್ರವಾಸಿ ತಾಣವನ್ನಾಗಿಸಬೇಕು ಬಹುಳ ದಿನದ ಕನಸಾಗಿದ್ದು  ಇದೀಗ ನಿಧಾನವಾಗಿದೆ ಇರಲಿ ಈ ಶೀಘ್ರದಲ್ಲಿ ಬೇಗನೆ ಪ್ರತಿಮೆ ನಿರ್ಮಾಣ ಕಾರ್ಯವಾಗಲಿ ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಿದರು. 

ನಂತರ ತಿಪಟೂರು  ತಾಲೂಕು, ಕರ್ನಾಟಕ ಭೀಮ್ ಸೇನೆಯ ಅಧ್ಯಕ್ಷರಾದ ಮಂಜುನಾಥ್ ಮರು ಸಿದ್ದಯ್ಯನ ಪಾಳ್ಯ  ಅವರು ಮಾತನಾಡಿ ನಮ್ಮ ಈ ಕರ್ನಾಟಕ ಭೀಮ ಸಂಘಟನೆ ಪ್ರತಿಯೊಂದು ಜಿಲ್ಲೆ, ತಾಲೂಕುಗಳಲ್ಲೂ ಸಹ ಇದ್ದು ಎಲ್ಲಾ ಸಂಘಟನೆ ಅವರು ಸಹ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 250 ಅಡಿ ಪ್ರತಿಮೆ ನಿರ್ಮಾಲ ಮಾಡಲು ಪ್ರತಿಯೊಂದು ಜಿಲ್ಲೆಗೂ ಸಹ ಆಗ್ರಹಿಸಿದ್ದೇವು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೆನ್ನೆ ಅಂಬೇಡ್ಕರ್ ಜಯಂತಿ ದಿನ ಬೃಹತ್ ಪ್ರತಿಮೆ ಮಾಡಲು ಘೋಷಣೆ ಮಾಡಿದ್ದು ನಮ್ಮ ಕರ್ನಾಟಕ ಭೀಮಸೇನೆ    ಪ್ರತಿಫಲವಾಗಿದೆ. ಅಂಬೇಡ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹಾಗೌರವ  ಸಲ್ಲಿಸಿದ್ದಾರೆ.

ಜಾಹಿರಾತು:

ರೈತ ಸಂಘದ ರಾಜಣ್ಣ ಮಾತನಾಡಿ ಆಂಧ್ರ ಮತ್ತು ತಮಿಳುನಾಡು ಮಾದರಿಯಂತೆ ನಮ್ಮಲ್ಲಿ ಏನು ಕಡಿಮೆ ಇಲ್ಲ ಮುಖ್ಯಮಂತ್ರಿ ಅವರು ಘೋಷಣೆ ಮಾಡಿದ್ದು ತುಂಬಾ ಸಂತೋಷದ ಸಂಗತಿ, ನಮ್ಮ ಬಹುದಿನದ ಕನಸಾಗಿರುವ  ತಿಪಟೂರನ್ನ  ಜಿಲ್ಲಾ ಕೇಂದ್ರವಾಗಿಸಿ ಮಾಡಿ. ತಿಪಟೂರಿನ ತಾಲೂಕಿನಲ್ಲೂ ಸಹ ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪ್ರತಿಭೆ ನಿರ್ಮಾಣ ಮಾಡಬೇಕೆಂದು. ತಿಪಟೂರು ಕರ್ನಾಟಕ ಭೀಮ ಸೇನೆ ಸಂಘಟನೆ ವತಿಯಿಂದ ಶ್ರೀ ಶ್ರೀ ಶ್ರೀ ರುದ್ರಮುನಿ ಮಹಾಸ್ವಾಮೀಜಿಯವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. 

ವರದಿ: ಮಂಜುನಾಥ್ ಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*