ಮೇ 19 ರಂದು ರವೀಂದ್ರ ಕಲಾಕ್ಷೇತ್ರ ದಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಜನ ಜಾಗೃತಿ ಸಮಾವೇಶ

ಭಾಸ್ಕರ ಪತ್ರಿಕೆ
0

ಮೇ 19 ರ ಮಧ್ಯಾಹ್ನ 2:30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಜನ ಜಾಗೃತಿ ಸಮಾವೇಶ ಹಾಗೂ ಪ್ರತಿಭಾವಂತ 2024-25 ನೇ ಸಾಲಿನ.   ಎಸ್ಎಸ್ಎಲ್ಸಿ. ಪಿಯುಸಿ ಪರೀಕ್ಷೆಯಲ್ಲಿ  ಶೇಕಡ  85 ರಷ್ಟು ಅಂಕ ಪಡೆದು ಉತ್ತೀರ್ಣರಾಗಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ಈ ಸಮಾವೇಶವನ್ನು ಆಯೋಜಿಸಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ರಾಜ್ಯಾಧ್ಯಕ್ಷ ಎಂ ಸೋಮಶೇಖರ್, ವಿಶ್ವಕರ್ಮ ಜನಜಾಗೃತಿ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ವಿಭಾಗ ರಾಜ್ಯ ಕಾರ್ಯದರ್ಶಿ ಶ್ರೀಮತಿ ವಸಂತ ಮುರುಳಿ ಆಚಾರ್ ರವರು ಈ ಸಮಾವೇಶದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಲೆ ಶಿಕ್ಷಣ ಸಾಹಿತ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಸಾಧಕೀಯರಿಗೆ ವಿಶ್ವಕರ್ಮ ಕಲಾ ಸಿಂಧು

ಮರ, ಕಬ್ಬಿಣ, ಕಂಚು. ಕಲ್ಲು, ಚಿನ್ನ-ಬೆಳ್ಳಿ ಕೆತ್ತನೆಯ 5 ಸಾಧಕರಿಗೆ ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ ಪ್ರಶಸ್ತಿ ನೀಡಲಾಗುತ್ತದೆ. ಈ ಆಯ್ಕೆಯು ಪಾರದರ್ಶಕವಾಗಿದ್ದು, ನಾಮ  ನಿರ್ದೇಶನಕ್ಕಾಗಿ ಆಹ್ವಾನ ನೀಡಲಾಗಿದೆ ಎಂದರು. 

 ವಿಶ್ವಕರ್ಮ ಸಮಾಜ ಅಲಕ್ಷಿತ ಸಮಾಜವಾಗಿದೆ. ಸಮಾಜಕ್ಕೆ ಶಾಶ್ವತ ಕೊಡುಗೆಗಳನ್ನು ನೀಡಿರುವ ನಮ್ಮ ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ರಾಜ್ಯದ ಹಿಂದುಳಿದ ವರ್ಗಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ಸಮುದಾಯ ವಿಶ್ವಕರ್ಮ ಸಮುದಾಯ. ಸಮಾಜದಲ್ಲಿ ನಮ್ಮದು ಪ್ರಬಲ ಸಮುದಾಯ. ವಿಶ್ವಕರ್ಮರ ಶಕ್ತಿ ಸಾಮರ್ಥ್ಯಗಳನ್ನು ರಾಜಕೀಯ ಪಕ್ಷಗಳಿಗೆ ರಾಜಕಾರಣಿಗಳಿಗೆ ಮನದಟ್ಟು ಮಾಡಿಕೊಡಲು ಈ ಸಮಾವೇಶ ಸಹಕಾರಿ ಆಗಲಿದೆ. ವಿಶ್ವಕರ್ಮ ಸಮಾಜಕ್ಕೆ ಅಗತ್ಯ ಸವಲತ್ತು ಹಾಗೂ ರಾಜಕೀಯ ಸ್ಥಾನಮಾನಗಳನ್ನು ಒದಗಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸಂಘದ ಎಲ್ಲಾ ಪದಾಧಿಕಾರಿಗಳು ಒತ್ತಾಯಿಸಿದರು,  ವಿಶ್ವಕರ್ಮ ಜನಜಾಗೃತಿ ಸಮಾವೇಶದಲ್ಲಿ, ನಮ್ಮ ಸಮುದಾಯದ ಎಲ್ಲಾ ಮಠಾಧೀಶರು, ಸಮುದಾಯದ ಸಾಧಕರು, ಗಣ್ಯರು ಉಪಸ್ಥಿತರಿದ್ದು ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಎಂದು ಅವರು ತಿಳಿಸಿದರು. 

ಜಾಹಿರಾತು:

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹೆಚ್. ಪರಮೇಶ್ವರಚಾರ್ ಮಹಿಳಾ ಕಾರ್ಯಾಧ್ಯಕ್ಷರಾದ ಕವಿತಾ ಬಡಿಗೇರ್, ಮಹಿಳಾ ರಾಜ್ಯ ಕಾರ್ಯದರ್ಶಿಗಳಾದ ಗಿರಿಜಾ ಸುರೇಶಚಾರ್ ಮಹಿಳಾ ವಿಭಾಗ ರಾಜ್ಯ ಕಾರ್ಯಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಕೈವಾರ ಉಪಾಧ್ಯಕ್ಷರಾದ ಕೆ ಟಿ ಜಯಣ್ಣಚಾರ್ ಹಾಗೂ ಸಮಾಜದ ಸಂಶೋಧಕರು ಮತ್ತು ಸಾಹಿತಿಗಳಾದ ಸತೀಶ್ ಮುಳ್ಳೂರ್ ಅವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*