ಟಾಲಿವುಡ್ ​ನ ಸ್ಟಾರ್ ನಟ ಮಹೇಶ್ ಬಾಬುಗೆ ಇಡಿ ನೋಟಿಸ್!

ಭಾಸ್ಕರ ಪತ್ರಿಕೆ
0

ಸದಾ ವಿವಾದಗಳಿಂದ ದೂರವಿರುವ ಟಾಲಿವುಡ್ ​ನ ಸ್ಟಾರ್ ನಟ ಮಹೇಶ್ ಬಾಬು ಅವರಿಗೂ ಇದೀಗ ಇಡಿ ಸಂಕಷ್ಟ ಎದುರಾಗಿದೆ. ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಮಹೇಶ್ ಬಾಬು ಈ ಸಂಸ್ಥೆಯ ಪ್ರಚಾರಕ್ಕಾಗಿ 5.9ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ.

ಏಪ್ರಿಲ್ 16ರಂದು ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಕಚೇರಿಗಳು ಹಾಗೂ ಈ ಕಂಪನಿಗಳ ಮುಖ್ಯಸ್ಥರ ಮನೆಗಳ ಮೇಲೆ ಇಡಿ ದಾಳಿ ನಡೆಸಿತ್ತು. ಜಾಹೀರಾತು ಪ್ರಚಾರಕ್ಕೆ ಸಂಬಂಧಿಸಿದಂತೆ  ಇಡಿ ಅಧಿಕಾರಿಗಳು ಮಹೇಶ್ ಬಾಬು ಅವರಿಗೆ ನೋಟಿಸ್ ನೀಡಿದೆ. ಏಪ್ರಿಲ್ 28ರ ಬೆಳಿಗ್ಗೆ 10:30ಕ್ಕೆ ಹೈದರಾಬಾದ್ ನಲ್ಲಿ ವಿಚಾರಣೆಗೆ ಹಾಜರಾಗುವಂತೆ  ನೋಟಿಸ್ ನಲ್ಲಿ ತಿಳಿಸಲಾಗಿದೆ.

ಸುರಾನ್ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್​ನಲ್ಲಿ ಸಾಕಷ್ಟು ಅಕ್ರಮಗಳು ನಡೆದಿರೋದು ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ಡೀಲಿಂಗ್​ ವೇಳೆ ಈ ಅಕ್ರಮ ಎಸೆಗಲಾಗಿದೆ ಎಂಬ ಆರೋಪವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*