
ತಿಪಟೂರು: ಏಪ್ರಿಲ್ 30ರಂದು ಭಾಸ್ಕರ್ ಪತ್ರಿಕಾ ಬಳಗ ವತಿಯಿಂದ ಮಹಾ ಮಾನವತಾವಾದಿ ಬಸವಣ್ಣ ನವರ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಜಿಲ್ಲಾಧ್ಯಕ್ಷರಾದ ಹಾಗೂ ಭಾಸ್ಕರ ಪತ್ರಿಕೆ ಮತ್ತು ಭಾಸ್ಕರ TV ಯುಟ್ಯೂಬ್ ಚಾನೆಲ್ ನ ಸಂಪಾದಕರಾದ ಡಾ!ಭಾಸ್ಕರ್ ಮಾತನಾಡಿ ಜನಪರ ಕೆಲಸಗಳನ್ನು ಮಾಡಿ ಜನರಿಗೆ "ಕಾಯಕವೇ ಕೈಲಾಸ "ಎಂದು ದುಡಿದು ತಿನ್ನುವುದನ್ನು ಕಲಿಸಿದ, ಜಾತಿ, ಲಿಂಗ, ಭೇದ ವಿಲ್ಲದೆ ಸರ್ವರೂ ಸಮಾನರು, ಇರುವುದೊಂದೇ ಜಾತಿ ಅದು ಮಾನವ ಜಾತಿ ಎಂದು ಸಾರಿದ ಮಹಾನ್ ಪುರುಷ ಶರಣ ತತ್ವದಲ್ಲಿ ಸಮಾನತೆಯನ್ನು ಮತ್ತು ಕಾಯಕ ನಿಷ್ಟೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ "ಶಿವ ಶರಣ"ರೆಂದು ಕರೆದ, ಜಗತ್ತಿಗೆ ಸಮಾನತೆಯನ್ನು ಸಾರಿದ ಮಹಾನ್ ಪುರುಷ ಎಂದರು, ಈ ಜಯಂತಿಯನ್ನು ತಿಪಟೂರಿನ ಹಾಸನ್ ವೃತ್ತದಲ್ಲಿ ಇರುವ ನಂದಿನಿ ಆವರಣದಲ್ಲಿ ಅಚರಿಸಲಾಯಿತು, ಈ ಸಂದರ್ಭದಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಜಿಲ್ಲಾಧ್ಯಕ್ಷರು, ಭಾಸ್ಕರ್ ಪತ್ರಿಕೆ ಮತ್ತು ಭಾಸ್ಕರ್ ಯುಟ್ಯೂಬ್ ಚಾನೆಲ್ ನ ಸಂಪಾದಕರಾದ ಡಾಕ್ಟರ್ ಭಾಸ್ಕರ್, ಮಾದಿಹಳ್ಳಿ ಉಮೇಶ್ ಅಧ್ಯಕ್ಷರು ಶ್ರೀ ಸಿದ್ದಿ ವಿನಾಯಕ ಸೇವಾ ಟ್ರಸ್ಟ್ ಬಿ.ಆರ್.ವಿ ಲೇಔಟ್ ಮತ್ತು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಡೆನೂರು ಸ್ವಾಮಿ ದಂಪತಿಗಳು, ಟಿಂಬರ್ ಕಿರಣ್, ಜಯಣ್ಣ ಹಿರಿಯ ವಕೀಲರು, ಕೆ.ರಾ ತಾಲ್ಲೂಕು ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ ಮುಂತಾದವರು ಹಾಜರಿದ್ದರು.

