ಅಂದು 11 ನೇಯ ಶತಮಾನದ ಪ್ರಾರಂಭ
ಚಾಲುಕ್ಯರ ಕಾಲಾ ಕಲ್ಯಾಣದಲ್ಲಿ ಬಿಜ್ಜಳ ರಾಜರ ಆಳ್ವಿಕೆಯ ಕಾಲಾದಲ್ಲಿ ಬಸವನಬಾಗೆವಾಡಿಯ ಊರಗೌಡನಾಗಿದ್ದವರು ಮಾದರಸ ಆ ಮಾದರಸನ ಪತ್ನಿಯ ಹೆಸರು ಚನ್ನಮ್ಮ, ಆ ಚನ್ನಮ್ಮನ ಮಗ ದೇವರಾಜ, ಚನ್ನಮ್ಮನು ನಿಧನರಾದರು, ನಂತರ ದೇವರಾಜ ರು, ಚಿಕ್ಕಪ್ರಾಯದಲ್ಲಿಯೆ ಅವರ ಸಂಬಂಧಿಕರು ಇದ್ದ ಊರಾದ ಬಳ್ಳಿಗಾವಿಗೆ ಬಂದರು ನಂತರ ರಟ್ಟಿಹಳ್ಳಿಗೆ ಬಂದು ಕದಂಬೇಶ್ವರ ದೇವಾಲಯ ದ ಸ್ಥಾನಿಕರಾದರು, ಪಾಳೆಯಗಾರರಾಗಿದ್ದರು
ಕೊನೆಗೆ ಅಂತ್ಯಕಾಲದಲ್ಲಿ ಅಂತರವಳ್ಳಿಯ ಗ್ರಾಮಕ್ಕೆ ಬಂದು ಲಿಂಗಕ್ಯರಾದರು ಶೈವವಿಶ್ವಕರ್ಮರ ಜಗದ್ಗುರುಗಳಾದರು,
ಬಸವನಬಾಗೆವಾಡಿಯಲ್ಲಿ ಮಾದಾರಸನ ಪತ್ನಿ ಚನ್ನಮ್ಮ ನಿಧನರಾದ ನಂತರ ಮಾದರಸರು ಮಾದಾಲಾಂಬಿಕೆಯನ್ನು ಮದುವೆಯಾದರು,
ಈ ಮಾದಾಲಾಂಬಿಕೆಯ ಮಗನೆ ಬಸವಚಾರ,
ಮಾದಲಾಂಬಿಕೆಯ ಕುಟುಂಬದವರು ರಾಜರ ಆಸ್ಥಾನದಲ್ಲಿ ಅದಾಗಲೆ ಮುಖ್ಯ ಹುದ್ದೆಗಳಲ್ಲಿ ಇದ್ದಿದ್ದರಿಂದ ಬಸವಚಾರರಿಗೆ ಸಹಜವಾಗಿಯೆ ಬಂಡಾರವನ್ನು ನೋಡಿಕೊಳ್ಳುವ ಹುದ್ದೆಯು ದೊರೆಯಿತು, ಅಂದರೆ ಚಿನ್ನದ ನಾಣ್ಯವನ್ನು ಪರೀಕ್ಷಿಸುವ ಮತ್ತು ಮುದ್ರಿಸುವ ಟಂಕಸಾಲೆಯ ಮತ್ತು ಖಜಾನೆಯ ಜವಬ್ದಾರಿಯು ದೊರೆಯಿತು, ಮುಖ್ಯಸ್ಥರಾದರು , ಅಕ್ಕಸಾಲಿಗ ಕುಟುಂಬದಿಂದ ಬಂದಿದ್ದರಿಂದ ಈ ಹುದ್ದೆಯು ಅವರಿಗೆ ದೊರೆಯಿತು, ಅದನ್ನು ಅಚ್ಚುಕಟ್ಟಾಗಿ ಮಾಡಿದ್ದರಿಂದ ಬಹಳ ಬೇಗ ಜನಮನ್ನಣೆ ದೊರೆಯಿತು, ಅಣ್ಣ ಎಂದೆ ಪ್ರಸಿದ್ದರಾದರು
ಬಸವಣ್ಣರಾದರು,
ಮುಖ್ಯ ಮಂತ್ರಿಗಳಾದರು,
ಇಂದಿನ ಕಾಲಾದಲ್ಲಿ
ಒಂದು ಕುಟುಂಬದಲ್ಲಿ ಆರ್ಥಿಕವಾಗಿ ಸಬಲರಾದರೆ ಸಾಕು ತನ್ನ ಕುಟುಂಬದವನ್ನು ದೂರ ಇಡುವವರನ್ನು, ಅಂತರವನ್ನು ಕಾಪಾಡಿಕೊಳ್ಳುವವರನ್ನು ನೊಡಿದ್ದೇವೆ,
ಇಂದಿಗೂ ಅಸ್ಪ್ರಶ್ಯತೆಯನ್ನು ನೊಡಿದ್ದೇವೆ, ಹಾಗಾದರೆ 12 ನೇಯ ಶತಮಾನದಲ್ಲಿ ಹೇಗಿರಬಹುದು ಊಹಿಸಿಕೊಳ್ಳಲು ಅಸಾಧ್ಯ, ಅಂತ ಸಂದರ್ಭದಲ್ಲಿ ಮಹಾಮಂತ್ರಿಯಾಗಿದ್ದ ಬಸವಣ್ಣನವರು ವೈಭೂಗದಿಂದ ಜೀವಿಸ ಬಹುದಿತ್ತು, ಪುರೋಹಿತ ಶಾಹಿತ್ವವನ್ನು ವಿರೋಧಿಸಿದರು, ಹೂಲೆಯರಿಗೆ ಮಾದಿಗರಿಗೆ ಸಮಾಗಾರರಿಗೆ ಶೊದ್ರರಿಗೆ ಲಿಂಗ ದೀಕ್ಷೆಯನ್ನು ನೀಡಿದರು,(ಮಾದಾರ ಚನ್ನಯ್ಯ ದೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಮುಂತಾದವರು)
ಮುಖ್ಯ ವಾಹಿನಿಗೆ ಕರೆತಂದರು, ದುರ್ಬಲ ರನ್ನು ಅಪ್ಪಿಕೊಂಡರು,
ಪ್ರಜಾಪ್ರಭುತ್ವ ತತ್ವವನ್ನು ತಂದರು
ಇದೆ ಅವರಿಗೆ ಮುಳುವಾಯಿತು ಕೇವಲ 35 ವರ್ಷದ ಪ್ರಾಯದಲ್ಲಿಯೆ ಅವರ ಅಂತ್ಯವು ಭೀಕರತೆಯಿಂದ ಕೂಡಿತು, ಬಸವಣ್ಣ ಎಂದರೆ ಎಂತಹ ವಿಸ್ಮಯ!!!
ಪುರೋಹಿತ ಶಾಹಿಗಿಂತ ,
ಕಾಯಕವೆ ಕೈಲಾಸವೆಂದ ಬಸವಣ್ಣನವರ ತತ್ವವೆ ಶ್ರೇಷ್ಠ ಎಂದು ಒಪ್ಪಿವಿರ...?
ಇವರ ತತ್ವದಿಂದ ಬಸವಣ್ಣನವರು ದೇವರಾದರು, ಜನರು ಅವರಿಗೆ ದೇವಾಲಯಗಳನ್ನು ಕಟ್ಟಿದರು, ಬಸವೇಶ್ವರ ದೇವಾಲಯಗಳೆಂದು ಪ್ರಸಿದ್ಧವಾದವು, ಲಂಡನ್ ನ್ನ ಥೇಮ್ಸನದಿಯ ದಂಡೆಯ ಮೇಲೆ ಅವರ ಪುಸ್ಥಳಿಯನ್ನು ಪ್ರತಿಷ್ಟಾಪಿಸಲಾಯಿತು, ಜಾತಿವಾದಕ್ಕಿಂತ ಮಾನಾವತಾ ವಾದವೆ ದೊಡ್ಡದು ಎಂದು ಜಗತ್ತಿಗೆ ಸಾರಿದರು,
ಸತೀಶ್ ಮುಳ್ಳೂರು
ಕೊಡಗು

