ತಿಪಟೂರು: ತಾಲೂಕಿನ ಕಾರ್ಮಿಕರ ಸಂಘಟನಾ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಮೇ ಒಂದರಂದು ಕಾರ್ಯಕ್ರಮವನ್ನು ಆಚರಿಸಲು ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಆರೋಗೋಟ ಗ್ರಾಮದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆಯನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷರಾದ ಸರ್ವೇಶ ಚಾರ್ ಕಾರ್ಮಿಕರ ದಿನಾಚರಣೆ ಪ್ರಯುಕ್ತ ತಾಲೂಕಿನ ಎಲ್ಲಾ ಕಾರ್ಮಿಕ ಬಂಧುಗಳಿಗೆ ಶುಭಾಶಯಗಳನ್ನು ಕೋರಿದರು ಹಾಗೂ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು ಒಳ್ಳೆ ಕಟ್ಟೆ ರೈತ ಕವಿ ಶಂಕ್ರಪ್ಪನವರು ಸಸಿಯನ್ನು ನೀಡುವುದು ಪ್ರಕೃತಿಯಿಂದ ಸಿಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು ಕಾರ್ಮಿಕ ಸಂಘದಿಂದ ತುಂಬಾ ಕಾರ್ಮಿಕರಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು ರೈಲ್ವೆ ಯೂನಿಯನ್ ಕಾರ್ಯದರ್ಶಿ ಕಾಂತಣ್ಣ ಸಂಘಟನೆಯಿಂದ ಜನರಿಗೆ ಅನುಕೂಲ ಆಗುವುದರ ಬಗ್ಗೆ ಮಾಹಿತಿ ನೀಡಿದರು ರಾಜ್ಯದ ಎಲ್ಲಾ ಕಾರ್ಮಿಕರಿಗೆ ಶುಭಾಶಯ ತಿಳಿಸಿದರು ಹಾಗೂ ಪ್ರಧಾನ ಕಾರ್ಯದರ್ಶಿಯಾದ ಧರಣೇಶ್ ಹಿರಿಯ ಸಂಪಾದಕರು ಭಾಸ್ಕರ್ ಆರೋಗಟ್ಟ ಗಂಗಾಧರ್ ಪರಮೇಶ ಕೆರಗೋಡಿ ಮೋಹನ್ ಮಂಜುನಾಥ್ ನಿಂಗಯ್ಯ ಲಕ್ಷ್ಮೀಕಾಂತ್ ಶಾಲಾ ಶಿಕ್ಷಕರು ಶಾಲಾ ಪುಟಾಣಿ ಮಕ್ಕಳು ಹಾಜರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default

