ಪಾಕಿಸ್ತಾನದ ಡ್ರೋನ್ ದಾಳಿ: ಒಂದೇ ಕುಟುಂಬದ ಮೂವರಿಗೆ ಗಾಯ: ಒಬ್ಬರ ಸ್ಥಿತಿ ಗಂಭೀರ

ಭಾಸ್ಕರ ಪತ್ರಿಕೆ
0

ಚಂಡೀಗಢ: ಪಾಕಿಸ್ತಾನವು ಶುಕ್ರವಾರ ರಾತ್ರಿ ಪಂಜಾಬ್ ನ ಗಡಿ ಜಿಲ್ಲೆಗಳಿಗೆ ಡ್ರೋನ್ ದಾಳಿ ನಡೆಸಿದ್ದು, ಪರಿಣಾಮವಾಗಿ ಫಿರೋಜ್ಪುರದ ಹಳ್ಳಿಯೊಂದರಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಗಾಯಗೊಂಡಿದ್ದಾರೆ.

“ಫಿರೋಜ್ ಪುರದಲ್ಲಿ ಭಾರೀ ಡ್ರೋನ್ ದಾಳಿ ನಡೆದಿದ್ದು, ಡ್ರೋನ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಅದು ಫಿರೋಜ್ ಪುರ ಬಳಿಯ ಖೈ ಫೆಮೆ ಕೆ ಗ್ರಾಮದಲ್ಲಿರುವ ಮನೆ ಮೇಲೆ ಬೆಂಕಿಯ ಉಂಡೆಯಾಗಿ ಬಿದ್ದಿದೆ. ಒಂದೇ ಕುಟುಂಬದ ಮೂವರು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಸಮಯದಲ್ಲಿ ಆ ಮಹಿಳೆ ಅಡುಗೆ ಮಾಡುತ್ತಿದ್ದಳು ಮತ್ತು ಅವರಿಗೆ ಹೆಚ್ಚಿನ ಸುಟ್ಟ ಗಾಯಗಳಾಗಿವೆ. ಅಲ್ಲದೆ ಆಕೆಯ ಪತಿ ಮತ್ತು ಮಗನಿಗೂ ಕೂಡ ಸುಟ್ಟು ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗ್ರಾಮವು ಸೇನಾ ಕಂಟೋನ್ಮೆಂಟ್ ಗೆ ಹತ್ತಿರದಲ್ಲಿದೆ ಮತ್ತು ಡ್ರೋನ್ ದಾಳಿಯು ಬಹುಶಃ ಅಲ್ಲಿನ ಸೇನಾ ನೆಲೆಯನ್ನು ಹೊಡೆಯುವ ಟಾರ್ಗೆಟ್ ಹೊಂದಿರಬಹುದು. ಆದರೆ ಅದು ತಪ್ಪಿ ಗ್ರಾಮದಲ್ಲಿ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು, ಪಾಕಿಸ್ತಾನ ಸೇನೆಯು ಶುಕ್ರವಾರ ಸಂಜೆ ಈ ಗಡಿ ಪಟ್ಟಣದಲ್ಲಿ ಸರಣಿ ಡ್ರೋನ್ಗಳನ್ನು ಹಾರಿಸಿತು. ಹಲವಾರು ಕೆಂಪು ಬಣ್ಣದ ಹಾರುವ ವಸ್ತುಗಳು (ಸ್ವರ್ಮ್ ಡ್ರೋನ್ ಗಳು) ಒಂದರ ನಂತರ ಒಂದರಂತೆ ಬಂದಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*