ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಮಿಲಿಟರಿ ಸಂಘರ್ಷದ ಮಧ್ಯೆ, ಇಂದು ಶನಿವಾರ ಬೆಳಗಿನ ಜಾವ ಪಂಜಾಬ್ ನ ಪಠಾಣ್ ಕೋಟ್ ಜಿಲ್ಲೆಯಲ್ಲಿ ಸ್ಫೋಟದಂತಹ ಶಬ್ದಗಳು ಕೇಳಿಬಂದವು.
ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಸ್ಫೋಟದ ಶಬ್ದಗಳು ಕೇಳಿಬಂದವು. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ನಿನ್ನೆ ಶುಕ್ರವಾರ ರಾತ್ರಿ ಪಠಾಣ್ ಕೋಟ್ ನಲ್ಲಿ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿ ಜನರು ಮನೆಯೊಳಗೆ ಇರುವಂತೆ ಒತ್ತಾಯಿಸಿದ್ದರು.
ಇಂದು ಬೆಳಗ್ಗೆ ಪಂಜಾಬ್ ನ ಅಮೃತಸರದಲ್ಲಿ ಭಾರತ ಪಾಕಿಸ್ತಾನದ ಡ್ರೋನ್ ಗಳನ್ನು ಹೊಡೆದುರುಳಿಸಿತು, ನೆರೆಯ ದೇಶವು ಗಡಿ ಪ್ರದೇಶಗಳ ಮೇಲೆ ದಾಳಿ ಮುಂದುವರಿಸಿದ್ದು, ಉದ್ವಿಗ್ನತೆ ಹೆಚ್ಚುತ್ತಿದೆ.
ನಮ್ಮ ಪಶ್ಚಿಮ ಗಡಿಗಳಲ್ಲಿ ಡ್ರೋನ್ ದಾಳಿ ಮತ್ತು ಇತರ ಯುದ್ಧಸಾಮಗ್ರಿಗಳೊಂದಿಗೆ ಪಾಕಿಸ್ತಾನದ ದಾಳಿ ಮುಂದುವರೆದಿದೆ. ಇಂದು ಅಮೃತಸರದ ಖಾಸಾ ಕ್ಯಾಂಟ್ ಮೇಲೆ ಹಾರುತ್ತಿರುವ ಬಹು ಶತ್ರು ಶಸ್ತ್ರಸಜ್ಜಿತ ಡ್ರೋನ್ ಗಳು ಕಂಡುಬಂದವು. ನಮ್ಮ ವಾಯು ರಕ್ಷಣಾ ಘಟಕಗಳು ಪ್ರತಿಕೂಲ ಡ್ರೋನ್ಗಳನ್ನು ತಕ್ಷಣವೇ ನಾಶಪಡಿಸಿದವು ಎಂದು ಸೇನೆಯು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

