ಬೆಂಗಳೂರು: ರಾಜ್ಯ ವಿಶ್ವಕರ್ಮ ಸಮಾಜ /ರಿ/ ಈ ಸಂಸ್ಥೆಯ ಚುನಾವಣೆಯು 25-05-2025 ರಂದು ಬಾನುವಾರ ಬೆಳಗ್ಗೆ 9 ರಿಂದ ಸಂಜೆ 4ರ ತನಕ ನಡೆಯುತ್ತಿದ್ದು ಎಲ್ಲ ಮತದಾರರು ಮತ ಚಲಾಯಿಸಬೇಕು ಎಂದು ಕೊರಲಾಗಿದೆ,
ರಾಜ್ಯದ ಸಮಸ್ತ ವಿಶ್ವಕರ್ಮ ಬಂಧುಗಳ ಹಿತಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು, ಇತ್ತೀಚಿನ ವರ್ಷದಲ್ಲಿ ತಾಂತ್ರಿಕ ಕಾರಣಗಳಿಂದ ಚುನಾವಣೆಯು ನಡೆದಿರಲಿಲ್ಲ, ಚುನಾವಣೆಯು ನಡೆಯದಿರುವುದು ಸಮಾಜದ ಹಿತದೃಷ್ಟಿಯಿಂದ ಅನಾನುಕೂಲವಾಗಿತ್ತು,
ವಿಶ್ವಕರ್ಮ ಸಮಾಜ ಎನ್ನುವುದಕ್ಕು ವಿಶ್ವಕರ್ಮ ಜನಾಂಗ ಎನ್ನುವುದಕ್ಕು ಬಹಳ ವ್ಯಾತ್ಯಾಸವಿದೆ,
ಸಾಮಾನ್ಯವಾಗಿ ವಿಶ್ವಕರ್ಮ ಸಮಾಜದ ಮೂಲ ಸಂಸ್ಥೆಯು ಎಲ್ಲಿದೆ ಎಂದು ಕೇಳಿದರೆ ಯಾರಬಳಿಯು ಉತ್ತರವಿಲ್ಲ ಎಲ್ಲವು ಪ್ರಾಂತೀಯವಾಗಿವೆ ವಿನಃ ಎಲ್ಲರು ನಮ್ಮವರು ಎಂದು ಹೇಳುವ ಸಂಸ್ಥೆಯೆ ಇಲ್ಲ, ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ರಾಜ್ಯ ವಿಶ್ವಕರ್ಮ ಸಮಾಜದ ಚುನಾವಣೆಯಲ್ಲಿ ಜಯಗಳಿಸಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದವರಿಗೆ ಬಹಳ ಜವಾಬ್ದಾರಿಯುತ ಕಾರ್ಯವಾಗಿದೆ ಅವರಿಗೆ ಸಮಾಜದ ಮೇಲೆ ಅಭಿಮಾನ ಇರಬೇಕಾಗಿದೆ, ಪ್ರತಿಯೊಂದು ಜಿಲ್ಲೆಯ ಅಧ್ಯಕ್ಷರನ್ನು ಆಯ್ಕೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಶ್ವಕರ್ಮ ಜನಾಂಗದ ಜನಸಂಖ್ಯೆಯ ಡಾಟವನ್ನು ಸಂಗ್ರಹಿಸಿಟ್ಟು ಕೊಳ್ಳಬೇಕಾಗುತ್ತದೆ ಅವರ ಯೋಗಕ್ಷೇಮವನ್ನು ವಿಚಾರಿಸಬೇಕಾಗುತ್ತದೆ, ಸರ್ಕಾರದ ಸವಲತ್ತುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗುತ್ತದೆ, ಪ್ರತಿವರ್ಷ ಸಂಸ್ಥೆಯ ಲೆಕ್ಕಪರಿಶೋಧನೆಯನ್ನು ಮಾಡಿಸಿ ಸಂಸ್ಥೆಯ ಸದಸ್ಯರಿಗೆ ಮಾಹಿತಿನೀಡುವುದು ಜವಾಬ್ದಾರಿಯುತ ಕೆಲಸವಾಗುತ್ತದೆ,
ಇದೆಲ್ಲ ಆಗಬೇಕೆಂದರೆ ಸದಸ್ಯರು ಕಡ್ಡಾಯವಾಗಿ ಚುನಾವಣೆಯಲ್ಲಿ ತಮ್ಮ ಮತದಾನವನ್ನು ಚಲಾಯಿಸುವ ಮೂಲಕ ಸಂಸ್ಥೆಯ ಉಳಿವಿಗೆ ಸಹಕರಿಸಬೇಕಾಗುತ್ತದೆ, ಹಾಗೆಯೆ ಚುನಾವಣೆಯನಂತರ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು,
ತಪ್ಪದೆ 25-05-2025 ಭಾನುವಾರ ಬೆಂಗಳೂರಿನ ಶೇಷಾದ್ರಿಪುರಂನ ನಟರಾಜ ಚಿತ್ರಮಂದಿರದ ಹತ್ತಿರ
ರಾಜ್ಯ ವಿಶ್ವಕರ್ಮ ಸಮಾಜದ ಸಂಸ್ಥೆಯಲ್ಲಿ ತಮ್ಮ ಮತದಾನವನ್ನು ಚಲಾಯಿಸಿ ತಮ್ಮ ಹಕ್ಕನ್ನು ಉಳಿಸಿ, ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಾ. ಭಾಸ್ಕರಾಚಾರ್ ಮನವಿ ಮಾಡಿದ್ದಾರೆ.

