ತಿಪಟೂರು: ಚೇತನ ಫೌಂಡೇಶನ್ ಕರ್ನಾಟಕ ಹಾಗು ಕರ್ನಾಟಕ ಚಲನಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಮತ್ತು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಪತರು ನಾಡಿನ ರೈತಕವಿ ಡಾ. ಪಿ.ಶಂಕರಪ್ಪ ಬಳ್ಳೇಕಟ್ಟೆ ರವರಿಗೆ ಸಾಹಿತ್ಯ ಮತ್ತು ಸಮಾಜ ಸೇವಾ ಸಾಧನೆಗಾಗಿ "ಗ್ಲೋಬಲ್ ಕನ್ನಡಿಗ ಪ್ರಶಸ್ತಿ" ಪ್ರಧಾನ ಮಾಡಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷರು ಖ್ಯಾತ ಲೇಖಕ ಹಾಗೂ ವಿಮರ್ಶಕರಾದ ಡಾ. ರಾಜಕುಮಾರ್ ಮಠಪತಿ (ರಾಗಂ) ಅವರ ಸರ್ವಾಧ್ಯಕ್ಷತಲ್ಲಿ ಸಮ್ಮೇಳನ ಉದ್ಘಾಟನೆಗೊಂಡು ಖ್ಯಾತ ಚಲಚಿತ್ರನಟರು ಹಾಗು ವಾಗ್ಮಿಗಳಾದ ಡಾ. ಚಿಕ್ಕಹೆಜ್ಜಾಜಿ ಮಹಾದೇವ್ ಅವರು ತಮ್ಮ ಉದ್ಘಾಟನಾ ನುಡಿಗಳಲ್ಲಿ ನಾಡಿನ ಕಲಾ ಸಾಹಿತ್ಯ ವೈಭವವ ಬಣ್ಣಿಸಿದರು , ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ,ಕಾವ್ಯವಾಚನ , ಸಾಹಿತ್ಯ ಸಂವಾದ ,ಚರ್ಚೆ ,ನವ ಪುಸ್ತಕಗಳ ಬಿಡುಗಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಸಮ್ಮೇಳನಾದ್ಯಕ್ಷರು ತಮ್ಮ ಸರ್ವಾಧ್ಯಕ್ಷಿಯ ನುಡಿಗಳಲ್ಲಿ ಕನ್ನಡವನ್ನ ನಾವು ಬಳಸಿದರೆ ಸಾಕು ಬೆಳೆಸುವುದು ಬೇಡ ಅದು ಆಗಲೆ ವಿಶ್ಚ ಚೇತನವಾಗಿದೆ, ಸಮಾಜಕ್ಕೆ ಅತ್ಯವಶ್ಯಕವಾದಂತಹ ನೈಜ ಬರವಣಿಗೆಯಿಂದ ಮಾತ್ರ ಸಮಾಜವನ್ನು ತಿದ್ದಿತೀಡಲು ಸಾಧ್ಯ ,ಸರ್ಕಾರಗಳು ನಿಜವಾದ ಎಲೆಮೆರೆಕಾಯಂತ ಸರ್ವ ಸಾಧಕರನ್ನು ಹಾಗು ಪರಿಶ್ರಮಿಸುಸುತ್ತಿರುವ ಕಲಾ ಸಾಹಿತ್ಯ ಸಮಾಜ ಸೇವಾ ಸಂಘ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಉತ್ತೇಜಿಸಬೇಕೆಂದರು. ಸಾಧಕರಿಗೆ ಗ್ಲೋಬಲ್ ಕನ್ನಡಿಗ /ಕನ್ನಡತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕವಯಿತ್ರಿ ಹೆಚ್ ಪುಷ್ಪ ಸಂಗಡಿಗರು ಪ್ರಾರ್ಥಸಿದರೆ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಜಿ ಶಿವಣ್ಣನವರು ಸರ್ವರನ್ನು ಸ್ವಾಗತಿಸಿ,ಸಮ್ಮೇಳನದ ಆಯೋಜಕರಾದ ಚಂದ್ರಶೇಖರ್ ಮಾಡಲಗೇರಿ ಪ್ರಸ್ತಾವಿಕ ನುಡಿಗಳಾಡಿದರು .ಮುಖ್ಯ ಅತಿಥಿಗಳಾಗಿ ಪ್ರಸಿದ್ದ ಲೇಖಕಿ ಶ್ವೇತ ಪ್ರಕಾಶ್, ಕವಯಿತ್ರಿ ಶಿವಲೀಲಾ ಹುಣಸಿಗಿ ,ಸಾಹಿತಿ ಸುರೇಶ್ ಕೊರಕೊಪ್ಪ, ಅಶ್ವಿನಿ ನವನಿಧಿ, ಚಿಂತಕ ಗಿರಿಧರರ್ಮೂರ್ತಿ, ಪ್ರಕಾಶಕ ವೀರಪುತ್ರ ಶ್ರೀನಿವಾಸ್ , ಸಮಾಜ ಸೇವಕ ಮಹೇಂದ್ರ ಮುಣ್ಣೋತ , ನಿರ್ವಾಹಕಿ ಅಶ್ವಿನಿ ನಕ್ಷತ್ರ, ನಿರೂಪಕಿ ಸಂಗೀತ ಮಠಪತಿ, ಸಂಘಟಕಿ ರೇಖಾ ಶಿವರಾಮ ಭಟ್ , ಮೇಘಮೈತ್ರಿಯ ಅಧ್ಯಕ್ಷರಾದ ರಮೇಶ್ ಕಮತಗಿ ಹಾಗೂ ನಾಡಿನಾದ್ಯಂತ ಆಗಮಿಸಿದ್ದ ಕವಿ ಕಲಾಸಾಹಿತ್ಯಾಭಿಮಾನಿಗಳಿಂದ ಸಂಭ್ರಮಿಸಿತು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default

