ಮೆಟ್ರೋದಲ್ಲಿ ಮಹಿಳೆಯರ ಫೋಟೋ, ವಿಡಿಯೋ ಕ್ಲಿಕ್ಕಿಸಿ ಇನ್ ಸ್ಟಾದಲ್ಲಿ ಅಪ್ ಲೋಡ್: ಕೇಸ್ ದಾಖಲು

ಭಾಸ್ಕರ ಪತ್ರಿಕೆ
0

ಬೆಂಗಳೂರು:  ನಮ್ಮ ಮೆಟ್ರೋ ರೈಲಿನಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ರಹಸ್ಯ ಫೋಟೋ, ವಿಡಿಯೋಗಳನ್ನು ಕ್ಲಿಕ್ಕಿಸಿ ಇನ್‌ ಸ್ಟಾದಲ್ಲಿ ಅಪ್‌ ಲೋಡ್ ಮಾಡುತ್ತಿದ್ದ ಕಿಡಿಗೇಡಿಯ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್ ಐಆರ್​ ದಾಖಲಾಗಿದೆ.

ಪ್ರಯಾಣಿಕರ ಸೋಗಿನಲ್ಲಿ ಬಂದಿರುವ ಕಿಡಿಗೇಡಿಗಳು ಮೆಟ್ರೋ ನಿಲ್ದಾಣಗಳು, ಹಾಗೂ ರೈಲಿನೊಳಗೆ ರಹಸ್ಯವಾಗಿ ಹೆಣ್ಣುಮಕ್ಕಳ ಅಸಂಬದ್ಧ ಫೋಟೋ, ವಿಡಿಯೋಗಳನ್ನು ಕ್ಲಿಕ್ಕಿಸಿರುವುದಲ್ಲದೇ ಅಶ್ಲೀಲ ಕ್ಯಾಪ್ಷನ್ ನೀಡಿ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಅಪ್‌ ಲೋಡ್ ಮಾಡುತ್ತಿರುವುದು ಕಂಡು ಬಂದಿದೆ.

5 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ metro_chicks ಎಂಬ ಖಾತೆಯಲ್ಲಿ ಏಪ್ರಿಲ್ 11ರಿಂದಲೂ ವಿಡಿಯೋ, ಫೋಟೋಗಳನ್ನು ಅಪ್‌ ಲೋಡ್ ಮಾಡಲಾಗಿದೆ.

ಬನಶಂಕರಿ ಠಾಣೆ ಪೊಲೀಸರು ಘಟನೆ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*