ಬೆಂಗಳೂರು: ಮಲ್ಲೇಶ್ವರಂ ಕ್ರಾಸ್‌ನಲ್ಲಿರುವ ಸಂಕೀರ್ಣದಲ್ಲಿರುವ 13ನೇ ಜೆ.ಪಿ.ರಾಯಲ್ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ| ವಸಂತ ಮುರಳಿರವರ ನೇತೃತ್ವದಲ್ಲಿ ಬೆಂಗಳೂರು ಟೌನ್ ಹಾಲಿನಲ್ಲಿ ಜೂನ್ 20ರಂದು ಶುಕ್ರವಾರ ಜರುಗಲಿರುವ ವಿಶ್ವಕರ್ಮ ಸಮ್ಮೇಳನದ ಸಿದ್ಧತೆ ಬಗ್ಗೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ|| ವಸಂತ ಮುರಳಿರವರು ವಿಶ್ವ ಕರ್ಮಜನಾಂಗದ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳು ಎಸ್.ಎಸ್.ಎಲ್.ಸಿ./ಪಿ.ಯು.ಸಿ.ಯಲ್ಲಿ ಶೇಕಡ 85%ರಷ್ಟು ಅಂಕ ಗಳಿಸಿರುವ * ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹಧನವನ್ನು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ನೀಡಲಾಗುವುದು, ಹಾಗೂ ಸಮಾಜದ ಸಾಧಕರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಈ ಸಮಾರಂಭಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಮಂತ್ರಿಗಳು ಆಗಮಿಸಲಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮದ ಯಶಸ್ಸಿಗೆ ಕುಲಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಬೇಕೆಂದು ಪೂರ್ವಭಾವಿ ಸಭೆಯಲ್ಲಿಡಾ| ವಸಂತ ಮುರಳಿರವರು ಮನವಿ ಮಾಡಿದರು. ಕರ್ನಾಟಕರಾಜ್ಯ ಸಭೆಯಲ್ಲಿ ವಿಶ್ವಕರ್ಮಜನ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಎಂ.ಸೋಮಶೇಖರ್ (ಕನ್ನಡರಾಜು) ರವರು ಜರುಗುವ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ನಂತರ ಕರ್ನಾಟಕ ರಾಜ್ಯ ವಿಶ್ವಕರ್ಮಜನ ಸೇವಾ ಸಂಘದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಾ. ಭಾಸ್ಕರ್ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಡಾ|| ವಸಂತ ಮುರಳಿ ನೇತೃತ್ವದಲ್ಲಿ ವಿಶ್ವಕರ್ಮ ಸಮ್ಮೇಳನದ ಪೂರ್ವಭಾವಿ ಸಭೆ
ಮೇ 27, 2025
0
ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷರಾ ಎಂ ಸೋಮಶೇಖರ್ (ಕನ್ನಡ ಸೋಮು) ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷರಾದ ವಸಂತ ಮುರಳಿ ಆಚಾರ್ಯರವರು ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ನೌಕರರ ವಿಭಾಗದ ರಾಜ್ಯಾಧ್ಯಕ್ಷರಾದ ಪ್ರೊಫೆಸರ್ ಎಂ ಪೂರ್ವಾಚಾರ್ ತುಮಕೂರು. ರಾಜ್ಯ ಕೋಶಾಧ್ಯಕ್ಷರಾದ ಕೆ ವಿ ದೇವೇಂದ್ರ ಚಾರ್. ಉಪಾಧ್ಯಕ್ಷರಾದ ಕೆ ಟಿ ಜಯಣ್ಣ. ರಾಜ್ಯ ಪ್ರಧಾನ ಕಾರ್ಯದರ್ಶಿ. ಹೆಚ್ ಪರಮೇಶ್ವರಚಾರ್ ಹೊಸದುರ್ಗ ಮಹಿಳಾ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಬಿ.ಎನ್ ಶೋಭಾ ಆಚಾರ್ಯ ಚಿಕ್ಕಮಗಳೂರು ರಾಜ್ಯ ಉಪಾಧ್ಯಕ್ಷರಾದ ಎಂ ಡಿ ಪುರುಷೋತ್ತಮಚಾರ್ ಬೆಂಗಳೂರು ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಾಗೇಂದ್ರ ಮೈಸೂರ್. ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಪ್ಪಾಜಿ. ಆರ್ ಮೈಸೂರು ರಾಜ್ಯ ಉಪಾಧ್ಯಕ್ಷರಾದ ರಾಮಲಿಂಗಚಾರ್ ಮೈಸೂರ್. ಭಾಸ್ಕರ್ ಪತ್ರಿಕೆಯ ಸಂಪಾದಕರು ಯೂಟ್ಯೂಬ್ ಚಾನೆಲ್ ಸಂಪಾದಕರಾದ ತಿಪಟೂರ್ ಭಾಸ್ಕರಚಾರ್ ಭಾಸ್ಕರ್ ಯುಟ್ಯೂಬ್ ಚಾನೆಲ್ ಸುದ್ದಿ ವಾಚಕರಾದ ಶುಭ ವಿಶ್ವಕರ್ಮ ರವರು. ಉಪಸ್ಥಿತರಿದ್ದರು.
Tags
