ಕುಡಿಯುವ ನೀರಿಗಾಗಿ ಗ್ರಾ.ಪಂ. ಕಚೇರಿಗೆ ಮುತ್ತಿಗೆ

ಭಾಸ್ಕರ ಪತ್ರಿಕೆ
0

ಬೀದರ್: ಔರಾದ್ ತಾಲ್ಲೂಕಿನ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ತಾಲ್ಲೂಕಿನ ಸಂತಪೂರ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು

ಗ್ರಾಮದ ಮಹಿಳೆಯರು ಸೇರಿದಂತೆ ಅನೇಕರು ಸಮಸ್ಯೆ ಹೇಳಿಕೊಳ್ಳಲು ಪಂಚಾಯಿತಿ ಕಚೇರಿಗೆ ಹೋದರೂ ಕೂಡ, ಸರಿಯಾದ ಸ್ಪಂದನೆ ದೊರಕಲಿಲ್ಲ, ಹೀಗಾಗಿ  ಸ್ಥಳದಲ್ಲೇ ಕೆಲ ಹೊತ್ತು ಧರಣಿ ನಡೆಸಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

ವಿಷಯ ತಿಳಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರನ್ನು ಸಮಾಧಾನ ಮಾಡಿ ಆದಷ್ಟು ಬೇಗ ನೀರಿನ ವ್ಯವಸ್ಥೆ ಮಾಡಲು ಭರವಸೆ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*