ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಭೀಕರ ಸ್ಫೋಟ!

ಭಾಸ್ಕರ ಪತ್ರಿಕೆ
0

ನವದೆಹಲಿ: ಭಾರತ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಭಾರೀ ಸ್ಪೋಟ ಸಂಭವಿಸಿದ್ದು, ಲಾಹೋರ್ ನ ವಿಮಾನ ನಿಲ್ದಾಣದ ಬಳಿ ಈ ಭೀಕರ ಸ್ಫೋಟ ಸಂಭವಿಸಿದೆ.

ಇಂದು ಬೆಳಗ್ಗೆ ಲಾಹೋರ್ ನಲ್ಲಿ ದೊಡ್ಡ ಸ್ಫೋಟ ಸಂಭವಿಸಿವೆ. ಸ್ಫೋಟವು ದೂರದವರೆಗೆ ಕಾಣಿಸಿದ್ದು, ತಕ್ಷಣವೇ ಅಲರ್ಟ್ ನೀಡುವ ಸೈರನ್ ಮೊಳಗಿದೆ. ಜನರು ಭೀತಿಯಿಂದ ಮನೆಗಳಿಂದ ಹೊರಗೆ ಓಡಿ ಹೋಗಿದ್ದಾರೆ.

ಲಾಹೋರ್ ನ ಗೋಪಾಲ್ ನಗರ ಮತ್ತು ನಸೀರಾಬಾದ್ ಪ್ರದೇಶಗಳಲ್ಲಿ, ವಾಲ್ಟನ್ ವಿಮಾನ ನಿಲ್ದಾಣದ ಬಳಿ ಸ್ಫೋಟಗಳು ಕೇಳಿಬಂದವು. ಜನರು ಭಯದಿಂದ ತಮ್ಮ ಮನೆಗಳಿಂದ ಹೊರಗೆ ಓಡುತ್ತಿರುವುದು ಕಂಡುಬಂದಿದೆ. ಅಲ್ಲದೆ, ಹೊಗೆ ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.

ಈ ಪ್ರದೇಶವು ಲಾಹೋರ್ ನ ಪ್ರಮುಖ ವಾಣಿಜ್ಯ ಜಿಲ್ಲೆ ಮತ್ತು ಲಾಹೋರ್ ಸೇನಾ ನೆಲೆಯ ಪಕ್ಕದಲ್ಲಿದೆ. ಪೊಲೀಸ್ ಮೂಲಗಳ ಪ್ರಕಾರ, ಈ ಸ್ಫೋಟಕ್ಕೆ 5–6 ಅಡಿ ಉದ್ದದ ಡ್ರೋನ್ ಕಾರಣವಾಗಿರಬಹುದು. ಡ್ರೋನ್ ನ ವ್ಯವಸ್ಥೆಯನ್ನು ಜಾಮ್ ಮಾಡುವ ಮೂಲಕ ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಯಾವುದೇ ಸಾವು ನೋವು ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*