
ಗಂಗಾವತಿ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಈಗಾಗಲೇ ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸಲು ಕಾರ್ಯ ಪ್ರವೃತ್ತವಾಗಿದ್ದು ಅದರಂತೆ ಒಳ ಮೀಸಲಾತಿ ಹಂಚಿಕೆ ವಿಚಾರವಾಗಿ ಸರಿಯಾದ ಅಂಕಿ ಅಂಶಗಳನ್ನು ಕಲೆ ಹಾಕಲು ಮತ್ತು ಹಲವು ಸಮಸ್ಯೆಗಳು ಉಂಟಾದ ಉಂಟಾಗಿರುವುದರಿಂದ ದಲಿತ ಸಮುದಾಯದಲ್ಲಿ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರ್ಕಾರವು ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ರವರ ಏಕ ಸದಸ್ಯ ಆಯೋಗವು ಜಾತಿಗಳತಿಯನ್ನು ಪ್ರಾರಂಭಿಸಲಾಗಿದೆ .ಅದರಂತೆ ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಸಮರ್ಪಕವಾಗಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಅವಕಾಶವಾಗುವಂತೆ ನಮ್ಮ ಕೇರಿಗಳಿಗೆ ಬರುವಂತಹ ಸಮೀಕ್ಷೆದಾರರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಇಟ್ಟಂಗಿ ಅವರು ಇಂದು ಗಂಗಾವತಿ ತಾಲೂಕಿನ ಹಿರೇಜಂತಕಲ್ ನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಜಾತಿಗಣತಿ ಸಮೀಕ್ಷೆಗೆ ಬರುವಂತಹ ಸಮೀಕ್ಷೆದಾರರಿಗೆ ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಕೋರುವ ಮಾಹಿತಿಯನ್ನು ಹೇಗೆ ನೀಡಬೇಕು ಎಂಬ ಬಗ್ಗೆ ಈ ಮೂಲಕ ಸಮುದಾಯದ ಕುಲಬಾಂಧವರಿಗೆ ತಿಳಿಸಬೇಕು. ನಮ್ಮ ಜನರಿಗೆ ಸರ್ಕಾರದಿಂದ ಸಿಗುವಂತಹ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಕ್ರಮವಹಿಸಿದೆ ಹಾಗಾಗಿ ಸಮೀಕ್ಷೆದಾರರಿಗೆ ನಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸದಸ್ಯರ ವಿವರಗಳನ್ನು ಅಚ್ಚುಕಟ್ಟಾಗಿ ನೀಡಬೇಕೆಂದು ಹಿರಿಯ ಮುಖಂಡರಾದ ಹುಸೇನಪ್ಪ ಹಂಚಿನಾಳ್ ಅವರು ತಿಳಿಸಿದರು.
ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು ಅವುಗಳ ಪೈಕಿ ವಲಯ ಬಲಗೈ ಛಲವಾದಿ ಮಹರ್ ಮಾಲ ಈ ತರ ಸಂಬಂಧಿಸಿದ ಜಾತಿಗಳಾಗಿರುತ್ತವೆ ಇರಲಿ ಆದಿ ದ್ರಾವಿಡ ಆದಿ ಕರ್ನಾಟಕ ಇನ್ನಿತರ ಜಾತಿಗಳಿದ್ದು ಇವುಗಳಲ್ಲಿ ಕರ್ನಾಟಕ ಸರ್ಕಾರದ ಸಮಾಜಕಾರ್ಯ ಇಲಾಖೆಯಿಂದ ಹೊರಡಿಸಲಾದ ಆದೇಶದ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ಹೊಲಯ,ಬಲಗೈ, ಚಲವಾದಿ, ಮಹರ್ ,ಪರಯ್ಯ ,ಮಾಲ ಗುಂಪಿಗೆ ಸಂಬಂಧಿಸಿದ ಯಲ್ಲಿ ಸರಿಯಾದ ರೀತಿಯಲ್ಲಿ ಮೂಲ ಜಾತಿಯನ್ನು ಮತ್ತು ಉಪಜಾತಿಯನ್ನು ನಮೂದಿಸಬೇಕೆಂದು ಹಿರಿಯ ದಲಿತ ಮುಖಂಡರಾದ ಮಾಗಿ ಹುಲುಗಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.
