ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ: 3 ವರ್ಷದ ಮಗು ದಾರುಣ ಸಾವು

ಭಾಸ್ಕರ ಪತ್ರಿಕೆ
0

ಬೆಳಗಾವಿ: ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ 3 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ, ಗೋಕಾಕ್ ನಗರದ, ಮಹಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ.

ಕೀರ್ತಿಲಾ ನಾಗೇಶ್​ ಪೂಜಾರಿ ಎಂಬ ಮಗು ಸಾವನ್ನಪ್ಪಿದ ಮಗುವಾಗಿದೆ. ಮೂರು ವರ್ಷದ ಮಗು ಮತ್ತು ಆಕೆಯ ಅಕ್ಕ ರೂಮಿನಲ್ಲಿ ಮಲಗಿದ್ದರು. ಈ ವೇಳೆ ರಾತ್ರಿ ಇಡಿ ಸುರಿದ ಮಳೆಗೆ ಮನೆಯ ಗೋಡೆ ನೆನೆದು ಬೆಳಗಿನ ಜಾವ ಕುಸಿದು ಬಿದ್ದಿದೆ. ಗೋಡೆ ಕುಸಿದ ಪರಿಣಾಮ ಮೂರು ವರ್ಷದ ಕೀರ್ತಿಲಾ ನಾಗೇಶ್​ ಪೂಜಾರಿ ಸಾವನ್ನಪ್ಪಿದ್ದು. ಆಕೆಯ 4 ವರ್ಷದ ಅಕ್ಕನಿಗೆ ಗಾಯವಾಗಿದೆ.

ಪಕ್ಕದ ರೂಮಿನಲ್ಲಿ ಮಲಗಿದ್ದ ತಂದೆ-ತಾಯಿ ಅಪಾಯದಿಂದ ಪಾರಾಗಿದ್ದು. ಬಾಲಕಿ ಶವವನ್ನು ಗೋಕಾಕ್​ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಶಿಫ್ಟ್​ ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಗೋಕಾಕ್​ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*