
ಒಗ್ಗಟ್ಟಿನಲ್ಲಿ ಬಲವಿದೆ ಸಂಘಟನೆಯಲ್ಲಿ ಜಯವಿದೆ ಎಂಬಂತೆ ವಿಶ್ವಕರ್ಮ ಸಮಾಜವನ್ನು ರಾಜ್ಯಾದ್ಯಂತ ಬಲಿಷ್ಠವಾಗಿ ಸಂಘಟಿಸಿ ಅನ್ಯ ಸಮಾಜಗಳ ಸಂಘಟನೆಗಳ ಮುಂದೆ ವಿಶ್ವಕರ್ಮ ಸಮಾಜದ ಸಂಘಟನೆಯನ್ನು ಬಲಿಷ್ಠವಾಗಿ ಸದೃಢವಾಗಿ ಸರ್ಕಾರಗಳು ಗುರುತಿಸುವ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಿ ಮುನ್ನಡೆಸುವ ಹೊಣೆಗಾರಿಕೆ ಈ ಚುನಾವಣೆಯಲ್ಲಿ ಜಯಶೀಲರಾಗಿರುವ ಸಮಾಜದ ಪ್ರತಿಯೊಬ್ಬ ನಿರ್ದೇಶಕರುಗಳ ಜವಾಬ್ದಾರಿಯಾಗಿದೆ ಇದು ಕೇವಲ ಸ್ಥಾನಮಾನ ಅಲ್ಲ ಸಮಾಜದ ಪ್ರಗತಿಗೆ ಮುನ್ನುಡಿ ಬರೆಯಲು ದೈವ ಕೊಟ್ಟ ಅವಕಾಶ ಎಂದು ಭಾವಿಸಿ ಸಮಾಜವನ್ನು ಮುನ್ನೆಲೆಗೆ ತನ್ನಿ ಎಂದು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ತಿಪಟೂರಿನ ಡಾ. ಭಾಸ್ಕರಾಚಾರ್ ಸಭಿನಂದನೆ ಸಲ್ಲಿಸಿದ್ದಾರೆ.

