ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಹೆಡ್ ಕಾನ್ಸ್ ಟೇಬಲ್ ವಿರುದ್ಧ ಗಂಭೀರ ಆರೋಪ

ಭಾಸ್ಕರ ಪತ್ರಿಕೆ
0

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧವೇ ಸುಹಾಸ್ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಇದೇ ಅನುಮಾನವನ್ನು ಹಿಂದುತ್ವ ಸಂಘಟನೆಗಳ ಮುಖಂಡರಾದ ಶರಣ್ ಪಂಪ್ ವೆಲ್ ಮತ್ತು ಕೆ.ಟಿ.ಉಲ್ಲಾಸ್ ವ್ಯಕ್ತಪಡಿಸಿದ್ದಾರೆ.

ಸುಹಾಸ್ ಹತ್ಯೆಯಲ್ಲಿ ಬಜಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ರಶೀದ್ ಭಾಗಿಯಾಗಿರುವ ಬಗ್ಗೆ ಹಿಂದುತ್ವ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿದ್ದು, ಅವರನ್ನು ವಿಚಾರಣೆಗೊಳಪಡಿಸಬೇಕು ಅಂತ ಒತ್ತಾಯ ಮಾಡಿವೆ.

ಸುಹಾಸ್ ಬಜಪೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಸುಹಾಸ್ ರನ್ನು ಆಗಾಗ ಠಾಣೆಗೆ ಕರೆದು ಪೊಲೀಸರು ಕಿರುಕುಳ ನೀಡುತ್ತಿದ್ದರು. ಕಾನ್ಸ್ ಟೇಬಲ್ ರಶೀದ್ ಪದೇ ಪದೇ ಕರೆದು ಕಿರುಕುಳ ನೀಡುತ್ತಿದ್ದರು ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆಯಾದ ದಿನವೂ ನೀನು ಮಾರಕಾಸ್ತ್ರ ಇಟ್ಟುಕೊಳ್ಳಬೇಡ, ನಿನ್ನ ಜೊತೆ ಯಾರೂ ಯುವಕರು ಇರಬಾರದು, ಹೆಚ್ಚಿಗೆ ಓಡಾದ ಬೇಡ ಎಂದು ಎಚ್ಚರಿಕೆ ಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.

ಹೆಡ್ ಕಾನ್ಸ್ ಟೇಬಲ್ ರಶೀದ್ ಸುಹಾಸ್ ನಿರಾಯುಧನಾಗಿರುವ ಮಾಹಿತಿ ಹಂತಕರಿಗೆ ರವಾನಿಸಿದ್ದಾರೆ, ಸುಹಾಸ್ ನ ಚಲನವಲನಗಳ ಮಾಹಿತಿ ನೀಡಿದ್ದಾರೆ ಎನ್ನುವ ಆರೋಪವನ್ನು ವಿಎಚ್ ಪಿ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಮತ್ತು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಚಾಲಕ ಕೆ.ಟಿ.ಉಲ್ಲಾಸ್ ಆರೋಪ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*