ವಿಶ್ವ ದಾಖಲೆಯನ್ನು ಮಾಡಿದ ಯಶವಂತ್

ಭಾಸ್ಕರ ಪತ್ರಿಕೆ
0


ಮಂಗಳೂರಿನ ಪುರಭವನದಲ್ಲಿ 3-06-2025 ರಂದು ಒಂದು ವಿಶೇಷ ಕಾರ್ಯಕ್ರಮ ನಡೆಯುತ್ತಿತ್ತು, ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ ಗೆ ಸಾಕ್ಷಿಯಾಯಿತು, ಎಂಜಿ ಯಶವಂತ ಇವರು ಒಬ್ಬ ಕನ್ನಡದ ಹೆಸರಾಂತ ಯುವ ಗಾಯಕ, ಇವರು ಎಸ್ ಪಿ ಬಾಲಸುಬ್ರಹ್ಮಣ್ಯ ರವರ ಅಭಿಮಾನಿ ಎಂದೆ ಹೇಳಬಹುದು ಅವರ ಜನ್ಮದಿನದ ಪ್ರಯುಕ್ತ 3-06-2025 ಮತ್ತು 4-06-2025 ಮಂಗಳವಾರ ಬುಧವಾರ 24 ಘಂಟೆ ನಿರಂತರವಾಗಿ ಬಾಲಸುಬ್ರಹ್ಮಣ್ಯಂರವರು ಹಾಡಿದ ಹಾಡುಗಳನ್ನ ಹಾಡಿದರು ಇದು ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ ನಲ್ಲಿ ದಾಖಲಾಯಿತು, 

ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ ಏಷ್ಯಮುಖ್ಯಸ್ಥ ಡಾ:ಮನಿಶ್ ವಿಶ್ನೋಯ್ ರವರು ಎಲ್ಲ ಗಣ್ಯರ ಎದುರಿಗೆ ಪದಕವನ್ನು ತೊಡಿಸಿ ಶುಭಹಾರೈಸಿದರು, 24 ಘಂಟೆ ನಿರಂತರವಾಗಿ ಹಾಡುವುದು ಅಷ್ಟುಸುಲಭದ ಮಾತಲ್ಲ  ಈ ಸಾಧನೆ ಮಾಡಿರುವುದಕ್ಕೆ ಹೆಮ್ಮೆ ಇದೆ ಎಂದರು,

ಉಡುಪಿ ಜಿಲ್ಲೆಯ ಬಿ ಜೆ ಪಿ ಅಧ್ಯಕ್ಷ ಶ್ರೀ ಕಿಶೋರ್ ಕುಮಾರ್, ಮಂಗಳೂರು ಎಸಿಪಿ ಗೀತಕುಲಕರ್ಣಿ, ಉದ್ಯಮಿ ವಾಲ್ಟರ್ ನಂದಳಿಕೆ, ಮೂಡಬಿದರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ನಿವೃತ್ತ ಎ ಸಿ ಪ್ರಭಾಕರಶರ್ಮ,ಉಧ್ಯಮಿ ಪೂರ್ಣಚಂದ್ರ ಜೈನ್, ಜಿ ಎಸ್ ಕಾಮತ್, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ, ಮಂಗಳೂರು ಪಾಲಿಕೆ ಸದಸ್ಯ ಶ್ರೀ ಜಗದೀಶ್ ಶೆಟ್ಟಿ, ಯಶವಂತರ ತಾಯಿ ಹೇಮಾವತಿ, ಬಿದರೂರು ಶ್ರೀ ರಮೇಶ್  ಉಪಸ್ಥಿತರಿದ್ದರು,

ಕಿರು ಪರಿಚಯ; ಯಶವಂತರವರು ಉಡುಪಿಯ ವಿಶ್ವಬ್ರಾಹ್ಮಣ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಸಂಸ್ಕೃತದಲ್ಲಿ ಎಂ ಎ ಪದವಿ ಪಡೆದರು ಇತಿಹಾಸದಲ್ಲಿಯು ಎಂ ಎ ಪದವಿ ಪಡೆದರು, ಸಂಗೀತ ವಿದ್ವಾಂಸರಾದರು, ಎದೆತುಂಬಿ ಹಾಡುವೆನು ಇದರ ವಿಜೇತರಾದರು, ಸ ರಿ ಗ ಮ ಪ ದ 20 ರ ಸ್ಪರ್ಧಿಯಾಗಿದ್ದರು, ಖಾಸಗಿ ಹೈಸ್ಕೂಲಿನಲ್ಲಿ ಉಪಾದ್ಯಾಯರಾಗಿದ್ದರು, ಎನ್ ಸಿ ಸಿ ಕಮಾಂಡರ್ ಆಗಿದ್ದರು, ಸಾವಿರಾರು ಕಾರ್ಯಕ್ರಮಗಳನ್ನು ನೀಡಿರುವರು, ಕುಕ್ಕೆಸುಬ್ರಮಣ್ಯಕ್ಕೆ ಅಂಟಿಕೊಂಡಿರುವ ಶನಿವಾರಸಂತೆಯ ಇವರ ಹುಟ್ಟಿದ ಊರು ಮುಳ್ಳೂರು, ಸಂಗೀತ ಪ್ರೇಮಿಗಳು  ಸ್ವಯಂ ಪ್ರೇರಿತರಾಗಿ ಪತ್ರಿಕಾ ವರದಿಯನ್ನು ನೋಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವದಾಖಲೆಗೆ ಸಾಕ್ಷಿಯಾದರು,

ಇವರಿಗೆ ಶುಭಹಾರೈಸುವವರು: ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಕರ್ನಾಟಕ ರಾಜ್ಯ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರು, ಭಾಸ್ಕರ ಪತ್ರಿಕಾ ಬಳಗ ತಿಪಟೂರು ಮತ್ತು ವಿಶ್ವಕರ್ಮ ಜನಸೇವಾ ಸಂಘದ ಸರ್ವಸದಸ್ಯರು, 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*